Library-logo-blue-outline.png
View-refresh.svg
Transclusion_Status_Detection_Tool

ಅನಾದಿಕುಳುಸನ್ಮತವಾದ ಏಕಾದಶಪ್ರಸಾದವ ಕುಳವ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಅನಾದಿಕುಳುಸನ್ಮತವಾದ ಏಕಾದಶಪ್ರಸಾದವ ಕುಳವ ತಿಳಿವಡೆ; ಪ್ರಥಮದಲ್ಲಿ ಗುರುಪ್ರಸಾದ
ದ್ವಿತೀಯದಲ್ಲಿ ಲಿಂಗಪ್ರಸಾದ
ತೃತೀಯದಲ್ಲಿ ಜಂಗಮಪ್ರಸಾದ
ಚತುರ್ಥದಲ್ಲಿ ಪ್ರಸಾದಿಪ್ರಸಾದ ಪಂಚಮದಲ್ಲಿ ಅಪ್ಯಾಯನ ಪ್ರಸಾದ
ಷಷ*ಮದಲ್ಲಿ ಸಮಯಪ್ರಸಾದ
ಸಪ್ತಮದಲ್ಲಿ ಪಂಚೇಂದ್ರಿಯವಿರಹಿತ ಪ್ರಸಾದ ಅಷ್ಟಮದಲ್ಲಿ ಅಂತಃಕರಣ ಚತುಷ್ಟಯವಿರಹಿತಪ್ರಸಾದ
ನವಮದಲ್ಲಿ ಸದ್ಭಾವಪ್ರಸಾದ
ದಶಮದಲ್ಲಿ ಸಮತಾಪ್ರಸಾದ
ಏಕಾದಶದಲ್ಲಿ ಜ್ಞಾನಪ್ರಸಾದ._ ಇಂತೀ ಏಕಾದಶ ಪ್ರಸಾದಸ್ಥಲವನತಿಗಳೆದ ಕೂಡಲಚೆನ್ನಸಂಗಯ್ಯನಲ್ಲಿ ಐಕ್ಯಪ್ರಸಾದಿಗೆ ನಮೋ ನಮೋ ಎಂದೆನು.