ಅನಾದಿಯಾಗಿ ಶಿವನುಂಟು
ಮಾಯೆಯುಂಟು
ಆತ್ಮನುಂಟೆಂಬುದನಾವರಿಯೆವಯ್ಯ. ಆದಿ ಅನಾದಿ ಸುರಾಳ ನಿರಾಳವಿಲ್ಲದಂದು
ಮಾಯೆಯನು ಕಾಣೆ
ಆತ್ಮನನು ಕಾಣೆ. ಮಹಾದೇವ ತಾನೊಬ್ಬನೇ ಇದ್ದೆನೆಂಬುದು ಕಾಣಬಂದಿತ್ತು ನೋಡ ಶಿವಜ್ಞಾನದೃಷ್ಟಿಗೆ. ಆ ಲಿಂಗನಿರ್ಮಿತದಿಂದ ಮಾಯೆ ಹುಟ್ಟಿತ್ತು ನೋಡಾ. ಆ ಮಾಯೆಯಿಂದ ತತ್ವಬ್ರಹ್ಮಾಂಡಾದಿ ಲೋಕಾದಿಲೋಕಂಗಳು ಹುಟ್ಟಿದವು ನೋಡಾ. ಹೀಂಗೆ ನಿನ್ನ ನೆನಹು ಮಾತ್ರದಿಂದ ತ್ರೆ ೈಜಗ ಹುಟ್ಟಿತ್ತು ನೋಡಾ. ಆ ತ್ರೈಜಗಂಗಳ ಉತ್ಪತ್ತಿ ಸ್ಥಿತಿ ಲಯಂಗಳಿಗೆ ನೀನೆ ಕಾರಣನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.