ಅನಾದಿ ಪರಶಿವತತ್ವದಿಂದ ಚಿತ್ತು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅನಾದಿ ಪರಶಿವತತ್ವದಿಂದ ಚಿತ್ತು ಉದಯವಾಯಿತ್ತು. ಆ ನಿರ್ಮಲಮಹಾಜ್ಞಾನಚಿತ್‍ಸ್ವರೂಪವೇ ಬಸವಣ್ಣ ನೋಡ. ಆ ಬಸವಣ್ಣನಿಂದ ನಾದ ಬಿಂದು ಕಳೆ. ಆ ನಾದ ಬಿಂದು ಕಳೆ ಸಮರಸವಾಗಿ ಅಖಂಡಪರಿಪೂರ್ಣಗೋಳಕಾಕಾರ ತೇಜೋಮೂರ್ತಿ ಲಿಂಗಸ್ವರೂಪವಾಯಿತ್ತು ನೋಡ. ಇದು ಕಾರಣ
ಅನಾದಿಶರಣ ಆದಿಲಿಂಗವೆಂದೆ
ಬಸವಣ್ಣನಿಂದ ಲಿಂಗವಾದ ಕಾರಣ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.