ಅನುಭವ ಅನುಭವವೆಂಬ ಅಣ್ಣಗಳು

ವಿಕಿಸೋರ್ಸ್ದಿಂದ



Pages   (key to Page Status)   


ಅನುಭವ ಅನುಭವವೆಂಬ ಅಣ್ಣಗಳು ನೀವು ಕೇಳಿರೆ
ಅನುಭವವೆಂಬುದೊಂದು ಎತ್ತು
ಕೆಟ್ಟಿತ್ತು. ಎತ್ತು ಗೇಣುದ್ದ
ಕೊಂಬು ಮೊಳದುದ್ದ. ಕೆಟ್ಟೆಂಟು ದಿನ
ಕಂಡು ಹದಿನಾರುದಿನ ನಿನ್ನೆ ಮೆಟ್ಟಿದ ನಾಟಿಯ ಮೊನ್ನೆ ಮೇವುದ ಕಂಡೆ ಗುಹೇಶ್ವರನೆಂಬ ಎತ್ತು ನಿಮ್ಮೊಳಗೈದಾನೆ; ಅರಸಿಕೊಳ್ಳಿರೊ.