ವಿಷಯಕ್ಕೆ ಹೋಗು

ಅನ್ನದಾನವ ಮಾಡಿದಡೇನಹುದು ?

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ಅನ್ನದಾನವ
ಮಾಡಿದಡೇನಹುದು
?
ಧರ್ಮವಹುದು.
ಹೊನ್ನದಾನವ
ಮಾಡಿದಡೇನಹುದು
?
ಶ್ರೀಯಹುದು.
ವಸ್ತ್ರದಾನವ
ಮಾಡಿದಡೇನಹುದು
?
ಪುಣ್ಯವಹುದು.
ಹೆಣ್ಣುದಾನವ
ಮಾಡಿದಡೇನಹುದು
?
ಫಲಪದವಹುದು_
ಇಂತೀ
ಚತುರ್ವಿಧ
ಕರಣಾದಿಗಳು
ಶುದ್ಧವಾದರೆ
ಮುಕ್ತಿಯಾಗುವುದು
ಕಾಣಾ
ಕೂಡಲಚೆನ್ನಸಂಗಮದೇವಾ