ಅನ್ನಪೂರ್ಣಾ/ರೋಟರಿಯ ಕೆಳಗೆ

ವಿಕಿಸೋರ್ಸ್ದಿಂದ
ಅನ್ನಪೂರ್ಣಾ
ರೋಟರಿಯ ಕೆಳಗೆ

Download this featured text as an EPUB file (suitable for most e-readers except Kindles). Download this featured text as a RTF file. Download this featured text as a PDF. Download this featured text as a MOBI file (suitable for Kindles). ಇದನ್ನು ಡೌನ್ಲೋಡ್ ಮಾಡಿ!



ರೋಟರಿಯ ಕೆಳಗೆ

ಮೇ ದಿನಾಂಕ ಎರಡು. ಬೆಳಗಾಗಿದೆ. ಬೆಳಗಗಿರಲೇಬೇಕು. ಎಂದು
ಆನಂದ್, ಮುಖವನ್ನು ಅರ್ಥ ಮರೆ ಮಾಡಿದ್ದ ಮುಸುಕಿನೊಳಗಿಂದಲೆ
ಕಣ್ಣು ತೆರೆಯದೆಯೇ, ಯೋಚಿಸುತ್ತಿದ್ದಾನೆ. ಎರಡು ವರ್ಷ್ದದ ಮಗು ಎದ್ದು
ಕುಳಿತು ಚೀರಾಡುತ್ತಿದೆ. ತಾರಾ ಭುಜ ಕುಲುಕುತ್ತಾ ಎಬ್ಬಿಸುತ್ತಿದ್ದಾಳೆ.
"ಏಳೇಂದ್ರೆ....ಏಳೆ...."
"ಹೂಂ ಊಂ."
ಕಾಲುಗಳು ಸೆಳೆಯುತ್ತಿವೆ. ಕಾಲಬೆರಳುಗಳು ನೆಟಕೆಗಾಗಿ ಹಾತೊರೆ ಯುತ್ತಿದೆ. ಕ್ಷೀಣಗೊಂಡ ದೇಹ, "ಇನ್ನಿಷ್ಟು-ಇನ್ನಿಷ್ಟು ನೆದ್ದೆ" ಎಂದು ಕರೆದು ಕೇಳುತ್ತಿದೆ. ಆದರೂ ಏಳಲೇಬೆಕು. ತಾರಾ ಹೇಳುತ್ತಿದ್ದಾಳೆ. "ಸಕ್ಕರೆ ಇಲ್ಲಾರೀ...." "ಹೂ. ಸಕ್ಕರೆ ಇಲ್ಲದೆ ಕಾಫಿ ಕುಡಿಯೋಣವಂತೆ." ....ಎದ್ದು ಕುಳಿತ ಆನಂದ್ ಮಗುವನ್ನೆತ್ತಿಕೊಂಡ. ಅಳಬೇಡವೆಂದು ಸಂತೈಸಿದ. ಮೂಲೆಗೆ ಬಿದ್ದಿದ್ದ ಅಮೇರಿಕನ್ ರಿಪೊರ್ಟರನ್ನು ಎತ್ತಿಕೊಂಡು ಬೊಂಬೆ ತೋರಿಸಿದ. ಅಮೆರಿಕದ ಬೊಂಬೆ ನೋಡಿದ ಮೇಲೆಯೂ ಮಗ ಅಳುತ್ತಲೇ ಇತ್ತು. ಅದೊಂದು ಗೂಡುಮನೆ. ಒಂದು ಮಲಗುವ ರೂಮು. ಅದೇ "ದಿವಾಣಖಾನೆ"!ಇನ್ನೊಂದು ಅಡುಗೆಯ ಕೊ ಡಿ.ಅಲ್ಲಿಯೇ ಬಚ್ಚಲು ಸೌದೆ ಒಲೆಯಿಂದ ಹೊರಟ ಹೊಗೆ ಮಲಗುವ ರೊಮನ್ನು ಹಾದು, ಒಡೆದ ಗಾಜಿನ ಕಿರಿಯ ಕಿಟಕಿಯ ಮೂಲಕ ಹೊರಕ್ಕೆ ಹೋಗುತ್ತಿತ್ತು. ಉಪಸಂಪಾದಕ ಆನಂದ್ ಅದನ್ನೇ ನೋಡುತ್ತ ಕುಳಿತ. ಅಳುತ್ತಿದ್ದ

ಮಗುವಿನಿಂದ ಅವನ ದೃಷ್ಟಿ ದೊರ ಸರಿಯಿತು. ಎಲ್ಲವು ಉರಿದು ಹೊ

ರೋಟರಿಯ ಕೆಳಗೆ

೨೧



ಯಾಗಿ ಹೋಗುತ್ತಿದೆ. ಎಲ್ಲವೂ ತಾನು ಕಂಡಿದ್ದ ಕನಸು, ತನ್ನ ಆದರ್ಶ,
ತನ್ನ ಬಾಳ್ವೆ-ಎಲ್ಲವು!
ಮೇ ಮೊದಲದಿನ, ನೋಟೀಸು ಬಂದಿತ್ತು. ಎಂಟನೆ ತಾರೀಖಿನಿಂದ
ಕೆಲಸದಿಂದ ವಜಾ, ಒಬ್ಬನೇ ಅಲ್ಲ, ಇಡೀ ಸಂಪಾದಕ ಮಂಡಲವೇ ವಜಾ.
ఒందాಣೆ ಬೆಲೆಯ ಅವರ ಆ ದಿನಪತ್ರಿಕೆಯ ನಿಂತುಹೋಗಬಹುದು
ಒಂದೂವರೆ ಆಣೆ ಬೆಲೆಯ ದಿನಪತ್ರಿಕೆಯ ಮಾಲೀಕರು ಅವನ್ನು ಕೊಂಡು
ಕೊಂಡಿದ್ದರು. ಆದರೆ ಹಳೆಯ ಪತ್ರಿಕೆಯಲ್ಲಿ ದುಡಿಯುತ್ತಿದ್ದವರನ್ನು ಅವರು
ಕೊಳ್ಳలిల్ల....
ಮನೆಯೆಂಬ ಕಟ್ಟಡದ ಹೊರಗೆ, ' ಆನಂದ್ ಬಿ. ಎಸ್. ಸಿ. ಪತ್ರಿ
ಕೋದ್ಯೋಗಿ' ಎಂಬ ಹೆಸರುಹಲಿಗೆ, ತೂಗಾಡುತ್ತಿದೆ. ಅದನ್ನು ದೊರ
ಕಿಸಲು ಒಂದೂವರೆ ರೂ. ಖರ್ಚು ತಗಲಿತ್ತು....ಒಂದೂವರೆರೂಪಾಯಿ....ಈ
ದಿನವಾದರೂ ಕೀಶನ ತರಬೇಕು. ಕೊಡುವ ಆರು ಔನ್ಸನ್ನು ಕೊಂಡು
ಕೊಳ್ಲುವ ಸಾಮರ್ಥ್ಯ ಇಲ್ಲದೆ ಹೋಯಿತಲ್ಲ!
ಇನ್ನು ಮುಂದೇನು? ಎ೦ಟು ವರ್ಷದ ಪತ್ರಿಕೋದ್ಯಮಿ ಜೀವನದ
ಬಳಿಕವೂ ಮತ್ತೆ ಕಾಡಿಸುತ್ತಿರುವುದು ಅದೇ ಸವಾಲು-ಮುಂದೇನು?
ಎದ್ದು ನಿಂತ ಆನಂದ್ ಕಿಟಕಿಯಿಂದ ಹೊರನೋಡಿದ ಸೂರ್ಯ
ರಶ್ಮಿ ಕಣ್ಣನ್ನು ಕುಕ್ಕಿತು. ಮುಖ ತಿರುಗಿಸಿ, ಕಿಟಕಿಗೆ ಬೆನ್ನು ಮಾಡಿ, ರೂಮಿನ
ಉದ್ದಗಲಕ್ಕೂ ಶೂನ್ಯ ದೃಷ್ಟಿಯನ್ನು ಬೀಗಿದ. ಎಲ್ಲಾ ಚೆದರಿಹೋಗಿದೆ.
ಬರೆಯಲೆಂದು ತಂದ್ದಿದ, ಒಂದು ಮುಗ್ಗುಲು ಖಾಲಿ ಇದ್ದ, ಅಮೇರಿಕನ್
ಇನ್ಫರ್ಮೇಷನ್ ಸರ್ವೀಸಿನ ಹಾಳೆಗಳ ರಾಶಿಯೆಲ್ಲ ಚೆದರಿಹೋಗಿದೆ.
ಭವಿಷ್ಯತ್ತಿನ ಭವ್ಯ ಕಟ್ಟಡದ ನಿರ್ಮಾಣಕ್ಕೆಂದು ತಂದಿದ್ದ, ಕಲ್ಪನೆಯ
ಸಾಮಗ್ರಿಗಳೆಲ್ಲ ಕರಗಿಹೋದ ಹಾಗೆ... ಅರಗಿನ ಮನೆಯಾದ ಆ ಕನಸಿನ
ಮನೆ....
ತಾರಾಗೆ ಆ ಸುದ್ದಿ ತಿಳಿಸಬೇಕು. ಆದರೆ ಧೈರ್ಯ ಸಾಲದು. ಆರು
ತಿಂಗಳ ಬಸುರಿ ಆಕೆ . ಮೊದಲ ಗಂಡನ ಬಳಿಕ ತಾವು ಬಯಸಿದ ಹೆಣ್ಣು

ಕೂಸೆಂದು ಬರುವುದೆಂದು ಅವರು ನಿರೀಕ್ಷಣೆಯ ಸುಖವನ್ನು ಅನುಭವವಿಸಿ


೨೨

ಅನ್ನಪೂರ್ಣಾ

ದ್ದರು. ಈಗ ಆ ನಿರೀಕ್ಷಣೆ ಶೂಲಪ್ರಾಯವಾಗಿದೆ. ಮಗು ಬರಬಹುದು
ಹುಡುಗಿಯೇ ಹುಟ್ಟಲೂಬಹುದು; ಮುಂದೆ ? ಅದರ ಪಾಲನೆ, ಪೋಷಣೆ?
ಏಪ್ರಿಲ್ ತಿಂಗಳ ಸಂಬಳದಿಂದ ಐವತ್ತು ರೂಪಾಯಿ ಆಗಲೆ ಆತ
ಮುಂಗಡ ಪಡೆದಿದ್ದ. ಉಳಿದುದು ಐವತ್ತು ರೂಪಾಯಿ. ಆದರಿಂದ ಹಳ್ಳಿ
ಯಲ್ಲಿರುವ ಇಳಿವಯಸ್ಸಿನ ತಾಯ್ತಂದೆಯರಿಗೆ ಕಳಿಸಬೇಕು. ಉಳಿದ
ಇಪ್ಪತ್ತರಲ್ಲಿ ಮುಂದೆ ಜೀವನ-ಕೆಲಸ ದೊರೆಯುವವರೆಗೂ ಇನ್ನೊಬ್ಬ
ಮಾಲೀಕನಿಂದ ಸಂಬಳ ಕೈ ಸೇರುವವರೆಗೂ!
.....ಬಾಡಿಗೆಗೆ, ಹಾಲಿನಾಕೆಗೆ, ಸೌದೆಗೆ, ರೇಶನ್ನಿಗೆ....
ಮೇ ತಿಂಗಳಲ್ಲಿ ಮುಂಗಡ ಪಡೆದು, ತಾರಾಗೊಂದು ಪ್ರಿಂಟ್-ಸೀರೆ
ಕೊಳ್ಳಬೇಕು; ಜೂನತಿಂಗಳಲ್ಲಿ ಮುಂಗಡ ಪಡೆದು ತನಗೊಂದು ಲಿನನ್
ಬುಶ್ ಕೋಟು ಮತ್ತು ರೇಡಿಮೇಡ್ ಪ್ಯಾಂಟು ಖರೀದಿ ಮಾಡಬೇಕು
ತನ್ನ ೪೪ರ ಮಾಡೆಲ್ ಶೂಸಿಗೆ ಈಗಲಾದರೂ' ಸೋಲ್ಸ ” ಹಾಕಬೇಕು.
ಎಷ್ಟೊಂದು ಯೋಜನೆಗಳಿದ್ದುವು!
"ಸೋಲ್" ಹಾಕುವುದ; ಚಪ್ಪಲಿಗೆ ಆತ್ಮ ಸೇರಿಸುವುದು! ಆತ್ಮ
ಎಂಬುದುಂಟೆ ? ಕೊಟ್ಟಧೀಶ ಮಾಲಿಕರೆನ್ನುವವರಿಗೆ ಆತ್ಮವೆಂಬುದುಂಟೆ?
ಅವರಿಗೆಲ್ಲ, ಬಿಸ್ಕತ್ತಿನ ಮುಖ ನೋಡದ ಎಳೆಯಮಗ, 'ಶ್ರೀಮಂತದ'
ಸುಖ ನೋಡದ ಗರ್ಭಿಣಿ ಹೆಂಡತಿ.... ಇಂಥ ಸಂಬಂಧಿಕರು ಇರುವುದುಂಟೆ ?
ಅಖಿಲ ಭಾರತ ಕಲಾ-ವಸ್ತುಪ್ರದರ್ಶನವನ್ನು ತಾರೆಯೂ ತಾನೂ
ನೋಡಬೇಕೆಂದು ಆನಂದ್ ಯೋಚಿಸಿದ್ದ. ಪತ್ರಿಕೆಗೆಂದು ಬಂದಿದ್ದ ಪಾಸನ್ನು
ಮಾಲೀಕರು ಒಯ್ದಿದ್ದರು. ಆತ ದುಡ್ಡು ಕೊಟ್ಟೀ ಹೋಗಬೇಕಿತ್ತು. ಹತ್ತನೆ
ತಾರೀಖಿಗೋ ಹದಿನೈದನೆ ತಾರೀಖಿಗೋ ಸಂಬಳ ಬಂದ ಮೇಲೆ ಹೋಗೋಣ
ವೆಂದು ಆತ್ಮ ಭಾವಿಸಿದ್ದ.... ಸದ್ಯಃ ವಸ್ತುಪ್ರದರ್ಶನ ಆಗ್ನಿಗೆ ಆಹುತಿಯಾಗಿ
ಒಂದೂವರೆ- ಎರಡು ರೂಪಾಯಿ ಕೈ ಬಿಟ್ಟು ಹೋಗುವ ಪರಿಸ್ಥಿತಿ ತಪ್ಪಿತು....
ತಾರಾ ಕೇಳಿದಳು:"ಏನಿದು ಹೀಗೆ ? ಮುಖಾನಾದರೂ ತೊಳ
ಕೊಳ್ಳಿ...."
ಆನಂದ್ ಚಲಿಸಿದ.... ಗಲ್ಲವನ್ನು ಮುಟ್ಟಿ ನೋಡಿದ. ಮೂರನೆಯ

ದಿನದ ಗಡ್ಡ. ಇನ್ನೂ ಒಂದು ದಿನ ಮುಂದಕ್ಕೆ ಹೋಗಲಿ ಎಂದುಕೊಂಡು

ರೋಟರಿಯ ಕೆಳಗೆ

೨೩

ಗಡ್ಡ ಬರದೇ ಇರುವ ಹಾಗೆ ಏನಾದರೂ ಏರ್ಪಾಡಿರುತ್ತಿದ್ದರೆ ಎಷ್ಟು ಚೆನಾಗಿ
ಗಿರುತ್ತಿತ್ತು !--ಎಂದು ನೂರಹತ್ತನೆಯ ಸಲ ಯೋಚಿಚಸಿಕೊಂಡ.
ಹಿಂದಿನ ರಾತ್ರಿಯ ಚಪಾತಿಯ ರುಚಿಯನ್ನು ಆನಂದ್ ನೋಡಿದ.
ಸಕ್ಕರೆ ಇಲ್ಲದ ಕಾಫಿಯನ್ನು ಗಂಟಲೊಳಗೆ ಸುರಿಬಿಟ್ಟ.
೪೪ರಿಂದೀಚೆಗೆ ಆರು ವರ್ಷ ಸರ್ವೀಸು ಕೊಟ್ಟ ಒಂದೇ ಒಂದಾಗ
ಉಣ್ಣೆಯ ಪಾಂಟು ಇಹಜೀವನದ ಬಗ್ಗೆ ವೈರಾಗ್ಯ ತೋರಿಸತೊಡಗಿತ್ತು
ಉಪಸಂಪಾದಕನ ಕುಶನ್ ಇಲ್ಲದ ಕುರ್ಚಿಗೆ ಅಂಟಿ ಅಂಟಿ ತೆಳ್ಳಗಾಗಿ, ఆల్లి
ఇల్లి ಅದು ಹರಿಯತೊಡಗಿತ್ತು. ಹರಿದುದನ್ನು ಮರೆಮಾಡಲೆಂದು ಮಾಮೂಲಿ
ನಂತೆ ಆತ ಬುಶ್ಕೋಟು ಹಾಕಿಕೊಂಡ: ಹದಿಮೂರು–ಹದಿನಾಲ್ಕು ದಿನ
ಗಳಿಂದಲೂ ಹಾಕಿಕೊಂಡೇ ಇದ್ದ ಬುಶ್ಕೋಟು ಅದು.
ಪತ್ರಿಕಾ ಕಚೇರಿಯಲ್ಲೆಲ್ಲಾ ಗುಜು ಗುಜು ಮಾತು. ಹೌದು-ತಾನೊ
ಬ್ಬನೇ ಅಲ್ಲ; ಒಂದಾಣೆ ದಿನಪತ್ರಿಕೆಯ ಈ ಕುಟುಂಬವೆಲ್ಲವು ಬೀದಿಗಿಳಿ
ಯುತ್ತಿದೆ. ಬೀದಿಗೆ! ಈ ಶಾರೀರಿಕ ಬೌದ್ಧಿಕ ಕೂಲಿಕಾದರರೆಲ್ಲ ಇನ್ನು ಕೆಲಸ
ಹುಡುಕಬೇಕು...ಕೆಲಸ...
ಸಂಪಾದಕರಾದರೋ, ತಮ್ಮ ತಾಲ್ಲಣಕು ಕೇ೦ದ್ರದ ಹೈಸ್ಕೂಲಿನಲ್ಲಿ
ಉಪಾಧ್ಯಾಯರಾಗಲು ತಿರ್ಮಾನ ಮಾಡಿದ್ದರು. ಇನ್ನೊಬ್ಬ ಉಪಸಂಸಾ
ದಕೆ, ಪೋಲೀಸ್ ಡಿಪಾರ್ಟಮೆಂಟ್ ಸೇರಲು ಹವಣಿಸುತ್ತಿದ್ದ. ಮತ್ತೊಬ್ಬ
ರೇಶನ್ ಕಚೇರಿಯಲ್ಲಿ ಗುಮಾಸ್ತೆ ಯಾಗಲು ಚಡಪಡಿಸುತ್ತಿದ್ದ, ಆದರೆ
ಕೆಲಸ ಸಿಕ್ಕಿಯೇ ಸಿಗುವುದೆಂದು ಹೇಳುವ ಸಾಹಸ ಯಾರೂ ಮಾಡಲಿಲ್ಲ.
ಆ ಮುದುಕ ಪೂಫ್ ರೀಡರ್ ? ಇನ್ನವನ ಸಂಸಾರದ ಗತಿ?
ఆ ಮಶಿನ್ ಮನ್, ಕಂಪಾಸಿಟರುಗಳು?
ಮಹಾದೇವನೊಬ್ಬನಿದ್ದ , ರಿಪೋರ್ಟರ್, ತುಂಟ ಹುಡುಗ. ಹೋದ
ವರ್ಷ ಇಂಟರ್ ಮುಗಿಸಿ ಹಿಂದು ಮುಂದುನೋಡದೆ ಪತ್ರಿಕೋದ್ಯಮಕ್ಕೆ
ಧುಮುಕಿದ್ದ. ಈ ಮುಗುಳ್ನಗುವಿನ ಆ ಸುಂದರ ಮುಖವೂ ಜೋತು

ಬಿದ್ದಿತ್ತು ಫ್ಯಾಶನ್ನಿಗಾಗಿ ನೀಳವಾದ ತಲೆಕೊದಲನ್ನು ಎತ್ತಿ ಹಿಂದಕ್ಕಸೆ

೨೪

ಅನ್ನಪೂಣಾ೯

ಎಂದು ಯಾವಾಗಲೂ ಆತ ತಿಳಿದಿದ್ದ. ತನ್ನನ್ನು ನೋಡಿದ ಹುಡುಗಿಯರು
ತನ್ನನ್ನು ಪ್ರೀತಿಸದೆ ಬೇರೆ ಗತಿಯೇ ಇಲ್ಲ ಎಂದು ಆತನ ದೃಢ ನಂಬಿಕೆ.
ಹೊಟೆಲಲ್ಲಿ ಸಾಲ, ಧೋಭಿಯಲ್ಲಿ ಸಾಲ, ಪುಸ್ತಕದಂಗಡಿಯಲ್ಲಿ ಸಾಲ,
ಸ್ನೇಹಿತರಲ್ಲಿ-ಬರೇ ನಮಸ್ಕಾರ. ಪರಿಚಯವಿದ್ದವರಲ್ಲೂ ಕೂಡಾ-ಸಾಲ !
ಹೀಗಿದ್ದರೂ ಯಾವುದಾದರೊಂದು ಸಭೆಯಲ್ಲಿ, ನೃತ್ಯಕೂಟದಲ್ಲಿ, ವಿವಾಹ
ಸಮಾರಂಭದಲ್ಲಿ ಶ್ರೀಮಂತರ - ಆ ಗರ್ಭ ಶ್ರೀಮಂತರ - ಅತಿ ಸುಂದರಿಯಾದ
ಹುಡುಗಿಯೊಬ್ಬಳು ತನ್ನನ್ನು ಪ್ರಥಮ ದೃಷ್ಟಿಗೇ ಪ್ರೀತಿಸುವಳೆಂಬ ಬಗ್ಗೆ,
ಅವನಿಗೆ ಸಂಶಯವೇ ಇರಲಿಲ್ಲ.
ಈಗ, ಮನೆ ಮಗುಚಿಕೊಂಡ ಹಾಗೆ....ಆಕಾಶ ಕಳಚಿಕೊಂಡ ಹಾಗೆ....
ನಾಭಿಯಲ್ಲೇ ನಡುಕ !
ಫೋನ್ ಟ್ರಿಣ್ ಗುಟ್ಟುತ್ತಲೆ ಇತ್ತು.
ಟೆಲಿಪ್ರಿಂಟರ್, ಇನ್ನೇನು ದೀರ್ಘ ನಿದ್ರೆ ಇಲ್ಲಿ ಬರಲಿದೆ ಎಂದು
ತಿಳಿದೂ, ಕಚ ಕಚಗುಟ್ಟುತ್ತಲಿತ್ತು.
ಆನಂದ್, ಮೆಶಿನ್ ರೂಮಿನೊಳಕ್ಕೆ ಹೋದ. " ನಮಸ್ಕಾರ
ಸಾರ್ ", " ನಮಸ್ಕಾರ ಸಾರ್ ", " ನಮಸ್ಕಾರ ಸಾರ್ ". " ಒಂದು
ತಿಂಗಳ ಸಂಬಳಾನಾದ್ರೂ ಜಾಸ್ತಿ ಕೊಡಲ್ವೆ ಸಾರ್ ", "ನೀವೇ ಒಂದು
ಪೇಪರ್‌ ಹೊರಡ್ಸಿ ಸಾರ್."
ಆನಂದ್ ಮುಗುಳ್ನಕ್ಕ. ಆ ನಗು ಬೆಪ್ಪನ ನಗುವಿನ ಹಾಗಿದೆ ಎನಿಸಿ
ತವನಿಗೆ.
ಟ್ರೆಡಲ್ ತೂಕಡಿಸುತ್ತಿತ್ತು. ಸಿಲಿಂಡರ್‌ ಆಯಾಸಗೊಂಡು ಮಲ
ಗಿತ್ತು. ಸಿಲಿಂಡರಿಗೆಲ್ಲ ಗೊತ್ತು ಅಲ್ಲಿನ ರಹಸ್ಯ. ಅದು ದಿನವೂ ಮುದ್ರಿಸು
ವುದು ಬರೇ ಎರಡು ಸಾವಿರ. ಅಷ್ಟಾದರೂ, ಅಲ್ಲಿ ಇಲ್ಲಿ, ತನ್ನ ಆ ಕೀಲಿ
ಈ ಕೀಲಿ ಕಳಚಿದೆ. ಆದರೆ ಜಾಹೀರಾತುದಾರರಿಗೆ " ಅತಿ ವಿಸ್ತಾರವಾದ
ಪ್ರಸಾರ ಸಂಖ್ಯೆ, ೧೫,೦೦೦ ! ನಮ್ಮದು ಫಸ್ಟ ಕ್ಲಾಸ್ ಮಶಿನ್ ಇವರೆ...."
ಬೈಂಡಿಂಗ್ ರೂಮಿನಲ್ಲಿ ಎಲ್ಲವೂ ಅಸ್ತವ್ಯಸ್ತವಾಗಿತ್ತು. ಕಂಪೋಸಿಂಗ್
ವಿಭಾಗದವರು " ಮುಂದೇನು? ” ಎಂಬ ವಿಷಯದ ಬಗ್ಗೆ ಚರ್ಚಾಕೂಟ

ರೋಟರಿಯ ಕೆಳಗೆ

೨೫

ನಡೆಸಿದ್ದರು ಸ್ಟಿಕ್ಕು, ಲೆಡ್ಡು, ಗಾಲಿಗಳು ಚಿತ್ರವಿಚಿತ್ರವಾಗಿ ಹರಡಿಹೋಗಿ
ದ್ದುವು.
ಆನಂದ್, ಮತ್ತೆ ತನ್ನ ಕುರ್ಚಿಯ ಬಳಿಗೆ ಬಂದ. ಏನಾದರೂ
ಮ್ಯಾಟರ್ ಬರೆಯಬೇಕು. ಪ್ರಾದೇಶಿಕ ಸುದ್ದಿ ಸಮಾಚಾರಗಳನ್ನು ಎಡಿಟ್
ಮಾಡಬೇಕು.
ನ್ಯೂಸ್ ಎಡಿಟರ ಮೇಜಿನ ಮೇಲಿಂದ ರಾತ್ರೆ ಬಂದಿದ್ದ. ಪಿ. ಟ. ಐ.
ಮೆಸ್ಸೇಜುಗಳನ್ನು ಓದೋಣವೆನ್ನಿಸಿತು. ಆದರೆ ಮನಸ್ಸಾಗಲಿಲ್ಲ.
"ಹಿಂದೂ" ಬಂತು ಯಾಂತ್ರಿಕವಾಗಿ ಆನಂದ್ ಆ ಕಾಲಂಗಳ
ಮೇಲೆ ದ್ರುಷ್ಟಿಯೋಡಿಸಿದ. "ವಿಶ್ವದಾದ್ಯಂತ ಮೇ ದಿನಾಚರಣೆ....ಮಾಸ್ಕೋ
ಪೆಕಿಂಗ್ ಗಳಲ್ಲಿ ಅದ್ಭುತ ಪರೇಡ್.... " ಹುಂ! ಶ್ರಮಜೀವಿಗಳ ಮೇ ದಿನ.
....ಆದರೆ ಇಲ್ಲಿ ಮೇ ದಿನವೇ, ಮೊದಲ ದಿನವೇ, ನಿರುದ್ಯೋಗದ
ಸಂದೇಶ ಬಂದಿತ್ತು.
ಆನಂದ್ ಏನನ್ನೋ ಬರೆಯ ಹೊರಟ. ಅಮೆರಿಕದ ನ್ಯೂಸ್ ಶೀಟು
ಗಳ ಖಾಲಿ ಮಗ್ಗುಲಮೇಲೆ , ಲೇಖನಿಯೋಡಿತು. ಗ್ಯಾಲಿಪ್ರೂಫ್, ಪೇಜ್
ಪ್ರೂಫ್, ಮೆಸಿನ್ ಪ್ರೂಫ್, ಟ್ರೆಡಲ್, ಸಿಲಿಂಡರ್, ರೋಟರಿ....ಎಂದೆಲ್ಲ
ಲೇಖನಿ ಗೀಚಿತು. ರೋಟರಿ ಎಂಬ ಶಬ್ದವನ್ನು ನಾಲ್ಕು ಸಲ ಬರೆಯಿತು.
ಕುಂಬಳಕಾಯಿಯಂಥ ದೊಡ್ಡಕ್ಷರಗಳಲ್ಲಿ ಅದು ಮೂಡಿತು.
....ಮಧ್ಯಾಹ್ನ ಪ್ರೆಸ್ಸಿನ ಸೈಕಲನ್ನೇರಿ ಆನಂದ್ ಮನೆಗೆ ಹೊರಟ.
ಅರ್ಧ ಫರ್ಲಾಂಗು ಹೋಗುವವರಿಗೂ ಎದುರು ಚಕ್ರ ಪಂಕ್ಚರಾಗಿದ್ದುದು
ಗೊತ್ತೇ ಆಗಲಿಲ್ಲ. ಪಂಕ್ಚರ್ ತೆಗೆಸಲು ಕಾಸಿರಲಿಲ್ಲ. ಸೈಕಲನ್ನು ಮೆತ್ತಗೆ
ವಾಪಸು ತಳ್ಳಿ, ಆ ಪಂಕ್ಚರಿಗೆ ತಾನೇ ಕಾರಣನೇನೋ ಎಂಬ ಮನೋಭಾವನ
ಯಿಂದ, ನಡೆದುಕೊಂಡೇ ಆನಂದ್ ಹೊರಟು ಹೋದ.
ತಾರಾ ಒಂದೊಂದುತುತ್ತು ಅನ್ನವಿಟ್ಟಿದ್ದಳು. ಎರಡೆರಡು ಚಪಾತಿ.
"ರಾತ್ರಿಗೆ ಅಕ್ಕಿಯಿಲ್ಲ, ಆರೇಳು ಚಪಾತಿಗೆ ಸಾಲುವಷ್ಟು ಹಿಟ್ಟಿದೆ," ಎಂದು
ತಾರಾ ಬಾಶ್ಮಿ ಕೊಟ್ಟಳು.
ಆನಂದ್ ಮಾತಾಡಲಿಲ್ಲ ತಲೆಬಾಗಿಸಿಕೊಂಡು "ಹೂಂ" ಎಂದ

ಮಜ್ಜಿಗೆ ನೀರಿನ ಶಾಸ್ತ್ರ ಮುಗಿಸಿ ಆತ ತಲೆ ಎತ್ತಿದ. ತಾರಾ ನಿಂತಿದ್ದಳು.

೨೬

ಅನ್ನಪೂರ್ಣಾ

ಇಬ್ಬರ ಕಣ್ಣುಗಳಲ್ಲೂ ಹನಿ ಮೂಡಿತ್ತು.
ಮಗುವನ್ನು ಮುದ್ದಿಸಿ ಆನಂದ್ ವಾಪಸು ಹೊರಟ.
........ನಾಲ್ಕು ಗಂಟೆಗೆ__ವಾರಪತ್ರಿಕೆಯ ಕ್ರುಷ್ಣಯ್ಯ ಬಂದಾಗ ಪರಿ
ಸ್ಥಿತಿಗೆ ಕಳೆ ಏರಿತು !
ಹದಿನಾರು ವರ್ಷ ಪತ್ರಿಕೋದ್ಯೋಗಿಯಾದ್ದ ವಿಧುರ ಕ್ರುಷ್ಣಯ್ಯ
ನಿರುದ್ಯೋಗಿಯಾಗಿದ್ದರು! ಹದಿನಾರು ವರ್ಷದ ಹಟಯೋಗ, ಕರ್ಮ
ಯೋಗ....ಆ ಆದರ್ಶ ಜೀವಿ ತೆತ್ತ ಬೆಲೆಯೋ?__ಮಹಾತಾಯಿಯಾದ
ತನ್ನ ಪತ್ನಿ, ಹತ್ತು ವರ್ಷದ ಎಳೆಯ ಮಗುವೂಂದು, ಈ ಇಬ್ಬರ ಮರಣದ
ಅನಂತರವೂ ನಾಲ್ಕು ಮಕ್ಕಳು ಉಳಿದಿದ್ದರು. ಹಿರಿಯ ಇಂಜನಿಯರಿಂಗ್
ಮೊದಲ ವರ್ಷ ಓದುತ್ತಿದ್ದಾನೆ; ಮಗಳು ಮದುವೆಗೆ ಸಿದ್ಧಳಾಗಿ ಬೆಳೆದು
ನಿಂತಿದ್ದಾಳೆ....
ಕ್ರುಷ್ಣಯ್ಯ ಇಷ್ಟು ವರ್ಷ ಪತ್ರಿಕೋದ್ಯಮದ ಬಾವುಟ ಹಾರಿಸಿದ್ದೇ
ಹಾರಿಸಿದ್ದು. ಸಂಪಾದನೆ?__ನರೆತ ತಲೆಗೂದಲು ತೀರಾ ಬಿಳಿ ! ಜತೆಗೆ
ಗೂರಲು ಕೆಮ್ಮು....ಈಗ ವಿಸ್ತಾರವಾದ ರಾಜಬೀದಿಯಲ್ಲಿ ಸ್ವತಂತ್ರನಾಗಿ
ನೇರವಾಗಿ ನಡೆಯಬಹುದು. ಮೂಗೇ ಇಲ್ಲದ ಬೀದಿನಾಯಿಯ ಹಾಗೆ.
ವಿಧುರ ಕ್ರುಷ್ಣಯ್ಯ ಹೇಳುತ್ತಿದ್ದಾರೆ: " ಸಾರ್ ಪತ್ರಿಕೋದ್ಯೋಗಿ
ಕ್ರುಷ್ಣಯ್ಯನವರ ಶೋಚನೀಯ ನಿಧನ; ಅವರ ಜನಪ್ರೀಯ ವಾರಪತ್ರಿಕೆ
ಯನ್ನು ಜನರ ಬದಲು ಬೇರೆ ಯಾರೋ ಮಹಾನುಭಾವರು ಕೊಂಡು
ಕೊಂಡರು ; ಕ್ರುಷ್ಣಯ್ಯ ಹುತಾತ್ಮರು__ಎಂದು ಬರೀರಿ ಸಾರ್ !"
ಆನಂದ್ ಮೂಕನಂತೆ ಕುಳಿತ.
ಸಂಜೆ ಆನಂದ್, ಮಹಾದೇವ, ಕ್ರುಷ್ಣಯ್ಯ__ತಿರುಗಾಡುತ್ತ ಹೊರ
ಟರು....ಗೊತ್ತಿಲ್ಲದ, ಗುರಿಇಲ್ಲದ ತಿರುಗಾಟ.......ಕ್ರುಷ್ಣಯ್ಯ "ಖಾಕಿ
ಸಿಗರೇಟ್ " ನ್ನು ಹೊರತೆಗೆದರು. ಮಹಾದೇವನಿಗಾದರೋ ಕಡಿಮೆ ಪಕ್ಷಕ್ಕೆ
ಬರ್ಕ್ಲ ಬೇಕು....ಆದರೆ ಕೊಂಡುಕೊಳ್ಳಲು ಕಾಸಿಲ್ಲ....ಆನಂದನಿಗೆ ಅಂಥ
ಚಾಳಿಯಿಲ್ಲ.
ಸರ್ಕಲ್ಲಿನ ಹತ್ತಿರ ಕಾಶೀನಾಥನ ಭೇಟಿಯಾಯಿತು. ಸಂಗೀತ, ಚಲ

ಚ್ಚಿತ್ರ, ನ್ರುತ್ಯ, ರಾಜಕೀಯ, ಸಂಗೀತಶಿಕ್ಷಣ, ತತ್ವಜ್ಞನ, ಸಾಹಿತ್ಯ, ಬ್ಲಾಕ್

ರೋಟರಿಯ ಕೆಳಗೆ

೨೭

ಮೇಲಿಂಗ್ ಎಲ್ಲಕ್ಕೂ ಮಿೂಸಲಾಗಿದ್ದ ಮಾಸಪತ್ರಿಕೆಯೊಂದರ ಸಂಪಾದಕ
ಆತ. ಮಾಸಿದ ಖಾದಿಯ ಶರಟು, ಗೆರೆಗೆರೆಯ ಪಾಯಜಾಮ, ಕಾಲಿಗೆ
ಬೆಡ್ ರೂಂ, ಚಪ್ಪಲಿ, ಶೋಕಿಯಾದ ಕ್ರಾಪು, ನೀಟಾದ ಮೂಗೂ ಗುಳಿಬಿದ್ದ
ಕೆನ್ನೆ, ಒಳಕ್ಕೆ ಅಡಗಿಕೊಂಡ ಕಣ್ಣುಗಳು....
ಕೈಯಲ್ಲಿ ಪ್ಲೇಯರ್ಸ್ ಉರಿಯುತ್ತಲೇ ಇತ್ಕು.
"ಏನಯ್ಯ ಧೊರೆ_?" ಎಂದರು ಕ್ರಿಷ್ಣಯ್ಯ.
"ಸೋ ಸಾರಿ ಕ್ರುಷ್ಣಯ್ಯನವರೇ, ಇದೇ ಈಗ‌ ಸಮಾಚಾರ ತಿಳೀತು....
ಸೋ ಸಾರಿ....ನಾನೂ ಅಷ್ಟೇನೆ....ಮಾಸಪತ್ರಿಕೆ ನಿಲ್ಲಿಸ್ಬಿಟ್ಟಿ, ನ್ಯೂಸ್
ಪ್ರಿಂಟಿಗೆ ಯಾರ್ರೀ ಹದಿನೆಂಟು ರೂಪಾಯಿ ಕೊಡೋರು........?"
" ಎಲ್ಲಾದರೂ ಕೆಲಸ ಕೊಡಿಸ್ತಿಯೇನಯ್ಯಾ? "
" ನನ್ನ ಕೇಳ್ತೀರಾ ಕ್ರುಷ್ಣಯ್ಯನವರೆ........ನಿಮ್ಮೆದುರಿಗೆ ನಾವೆಲ್ಲಾ
ಹುಡುಗರು.... "
" ಧನ್ಯ ! " ಎಂದುಕೊಂಡರು ಕ್ರುಷ್ಣಯನವರು. ಮುಂಜಾವಿಂದ
ಮುಂಜಾವಿನವರೆಗೆ ದುಡಿಯುವ, ಯಾವ ಯಾವ ಗಂಡ ಹೆಂಡಿರಿಗೆ ಕಲಹ
ವಿದೆ ಎಂದು ಖಾನೇಶುಮಾರಿ ತೆಗೆಯುವ, ಹಗಲು ಹೊತ್ತು ಬೀದಿ__ರಾತ್ರಿ
ಗಲ್ಲಿಯೇ ಎಡ್ರೆಸಾದ, ಈ‌ ಮಹಾನುಭಾವ ಪತ್ರಿಕೋದ್ಯೋಗಿಯಿಂದಾದರೂ
" ಹಿರಿಯ " ಎನ್ನಿಸಿಕೊಂಡದ್ದಾಯಿತಲ್ಲಾ !
ದೊಡ್ಡ ಬೀದಿಯ ನೂಕು ನುಗ್ಗುಲಿನಲ್ಲಿ ಈ ನಾಲ್ವರೂ ಸಾಗಿದರಪ
ಮಾತು ರಾಜಕೀಯಕ್ಕೆ ತಿರುಗಿತು. ಆನಂದ್ ತಾನೊಬ್ಬ ಪ್ರಜಪ್ರಭುತ್ವ
ವಾದಿ ಎಂದು ತಿಳಿದುಕೊಂಡವನು. ಕ್ರುಷ್ಣಯ್ಯ ಕಾಂಗ್ರೆಸ್‌ ಚಳವಳಿಯಲ್ಲಿ
ದುಡಿದವರು, ಮಾಡಿ ಮಡಿದು ಜೀವಚ್ಛವವಾಜವರು; ಮಹಾದೇವನಿಗೆ
ಅಭಿಪ್ರಾಯಗಳೇ ಇಲ್ಲ. ಕಾಶೀನಾಥ ಯಾವ ಅಭಿಪ್ರಾಯಕ್ಕೆ ಬೇಕಾದರೂ
ಅಂಟಿಕೊಳ್ಳಬಲ್ಲ ಸಮರ್ಥ.
ಆತನೇ ಮಾತಿನ ಮಲ್ಲ. ಆತ ಹೇಳಿದ.
ಈ ನ್ಯೂಸ್ ಪ್ರಿಂಟ್ ಬಿಕ್ಕಟ್ಟಿಗೆ, ವಿಶ್ವ ಬಿಕ್ಕಟ್ಟಿಗೆ, ಯುದ್ಧ ಭೀತಿಗೆ,
ಎಲ್ಲಕ್ಕೂ ಕಮ್ಯೂನಿಷ್ಠರೇ ಕಾರಣ!...ಅವರ್ನ ಫೈಟ್ ಮಾಡೇತೀರ್ಬೇಕು..."

" ಅದಕ್ಕೆ ನಿಮ್ಮ ಕಾರ್ಯಕ್ರಮ? "

೨೮

ಅನ್ನಪೂರ್ಣಾ

" ಅಮೇರಿಕನ್ ಇನ್ ಫರ್ಮೇಶನ್ ಸರ್ವೀಸಿನವರು, 'ಕನ್ನಡ ಸೆಕ್ಷನ್
ತೆರೀಬೇಕು, ನೀನೇ ಅರ್ಗನೈಸ್ ಮಾಡೂ'ಂತಾ ನನ್ನ ಕೆಳ್ಕೊಂಡಿದ್ದಾರೆ
ಸಂಬಳ ತಕ್ಕಮಟ್ಟಿಗಿದೆ. ಹಂಡ್ರಡ್ ಡಾಲರ್ಸ ಪರ್ ಮಂತ್__೫೦೦
ರೂಪಾಯಿ...."
ಕ್ರುಷ್ಣಯ್ಯ ನೊಂದಮನಸ್ಸಿನಿಂದ ಉಗುಳುನುಂಗಿಕೊಂಡರು. ಆನಂದ
ತಲೆಬಾಗಿದ. ದ್ರುಷ್ಟಿಪ್ಯಾಂಟಿನಕಡೆಗೆ ಮಾಸಿದ ಶೂಸಿನಕಡೆಗೆ ಹರಿಯಿತು
ಮಹಾದೇವ. ಹಾದು ಹೋಗುತ್ತಿದ್ದ ಸಿಂಧಿ ಹುಡುಗಿಯರಿಬ್ಬರನ್ನು
ನೋಡಿದ.
ದ್ರುಷ್ಟಿಯೂ ಆತ್ತ ತಿರುಗಿತು. ಆನಂದನ ಕೈಗಳ ಪ್ಯಾಂಟಿನ ಜೇಬುಗಳ
ಒಳಗಿದ್ದವು. ಎಡಗೈಬೆರಳುಗಳು ಲಟಿಕೆ ಮುರಿಯುತ್ತಿದ್ದವು. ಬಲಗೈ
ಜೇಬಿನಲ್ಲಿ ಆರೆಂಟಾಣೆಯಿತ್ತು. ಆದರೆ ಮನೆಗೆ ತರಕಾರಿ ಒಯ್ಯಬೇಕು
ಒಂದು ಕಸಬರಿಕೆ ಒಯ್ಯಬೇಕು. ಮಹಾದೇವನ ಮುಖವಾದರೋ ಅಳ
ಮೋರೆಯೇ. ಕಾಶೀನಾಥನ ಪರ್ಸಿನಲ್ಲಿ ರೂಪಾಯಿಗಳಿದ್ದುವು. ಆದರೆ
ಸಹೋದ್ಯೋಗಿಗಳಿಗೆ ತಿಂಡಿತೀರ್ಥ ಎಂದೂ ಕೊಟ್ಟವನಲ್ಲ ಆತ. ಮೇಲಾಗಿ
ಆ ಹಣ ವೆಚ್ಚಕ್ಕೆ ಬೇಕು.
ಕಾಲುಗಳು ಮುಂದೆ ಸಾಗಿದುವು; ಹೋಟೆಲು ಹಿಂದುಳಿಯಿತು.
× × × ×
....ರಾತ್ರೆ ಬಹಳ ಹೊತ್ತು ಆನಂದನಿಗೆ ನಿದ್ದೆಬರಲಿಲ್ಲ. ಮೈ ಕೈ
ನೋಯುತ್ತಿತ್ತು. ಹ್ರುದಯ ಮಿಡಿಯುತ್ತಿತ್ತು. ಮನಸ್ಸು ಸಿಡಿಯುತ್ತಿತ್ತು....
" ಥೂ " ಎಂದುಕೊಂಡನಾತ.... " ಎಂಥ ಜೀವನ !"
.... ಚಲಪತಿರಾಯರು ಭಾಷಣ ಕೊಡಬಹುದು__ಪತ್ತಿಕೋದ್ಯೋಗಿ
ಗಳೆಲ್ಲ ಟ್ರೇಡ್ ಯೂನಿಯನ್ ತಳಹದಿಯ. ಮೇಲೆ ಸಂಘಟಿತರಾಗಬೇಕು_
ಎಂದು. ಆದರೆ ವಾಸ್ತವಾಂಶವೇನು ? ಕ್ರೂರ ಸತ್ಯವೇನು?
....ನಾಳೆ ತಾರೆಗೆ ತಿಳಿಸಬೇಕು ಅತ್ತೆ ಮನೆಯವರು ಏನುಬೇಕಾ
ದರೂ ತಿಳಿದುಕೊಳ್ಳಲಿ, ತಾರೆಯನ್ನು ಈ ಸಲವೂ ಹೆರಿಗೆಗೆ ಮೊದಲಮಗುವಿ
ರೋಟರಿಯ ಕೆಳಗೆ ನೊಡನೆ ಅಲ್ಲೀಗೇ ಕಳುಹಿಸಿಬಿಡುವುದು. ತಾನು ಸುತ್ತಾಡುವುದು....ಇಲ್ಲ.
ಪತ್ರಿಕೋದ್ಯಮ ಬಿಡಬಾರದು....ಎಲ್ಲಾದರೂ ದೊಡ್ಡ ಪತ್ರಿಕೆಯಲ್ಲಿ, ಸದ್ಯ
ಕಡಿಮೆ ಸಂಬಳವಾದರೂ ಸರಿ, ಸೇರಿಕೊಳ್ಳಬೇಕು. ಬೇರೆ ಉದ್ಯೋಗ
ವೆಂದರೆ, ಸಿಗುವುದಾದರೂ ಎಲ್ಲಿ ? ಕೋಡಿಸುವುದಾದರೂ ಯಾರೂ?
ಪತ್ರಿಕೋದ್ಯಮದ ರೊಮಾನ್ಸ್ ಇಲ್ಲಿಗೇ ಮುಕ್ತಾಯವಾಗಬೇಕೇ ?
ತಾನೂ, ಕೂದಲೆಲ್ಲ ಮೂವತ್ತರೊಳಗೇ ಸಂಪೂರ್ಣವಾಗಿ ನರೆತು ಹೋಗು
ವಂತೆ ದುಡಿದು, ಜೀವಂತ ಸಮಾಧಿಯಲ್ಲಿ ಆಡಗಲೆ ? ಎಂಥ ಭೀಕರ
ರಾತ್ರೆ....
ನಿಧಾನವಾಗಿ ನಿದ್ದೆ ನುಸುಳಿಕೊಂಡು ಬಂದು ದಯೆ ತೋರಿಸಿತು....
ಒಂದು ಸ್ವಪ್ನ ಆತನಿಗೆ.
__ಭವ್ಯವಾದೊಂದು ಮಹಾಮುದ್ರಣಾಲಯ. ಒಂಟಿಯಷ್ಟು ಎತ್ತ
ರದ, ನಾಲ್ಕು ಆನೆಯಷ್ಟು ಗಾತ್ರದ ರೋಟರಿಯಂತ್ರವೊಂದು ಕೆಲಸ ನಡೆಸಿದೆ.
ಒಂದು ದೊಡ್ಡ ದೈನಿಕ, ದೊಡ್ಡ ಸಾಪ್ತಾಹಿಕ, ದೊಡ್ಡಮಾಸಿಕ, ಬಣ್ಣ ಬಣ್ಣ
ಗಳಲ್ಲಿ ಅಚ್ಚಾಗಿ, ಮಡಿಕೆಯಾಗಿ, ಹೊದಿಕೆಯಾಗಿ, ಅಚ್ಚು ಕಟ್ಟಾಗಿ ಜತೆ
ಯಾಗಿಯೇ ರಾಶಿ ಬೀಳುತ್ತಿದೆ. ಮೂಲೆಯಲ್ಲಿ ನಾಲ್ಕಾರು ಟ್ರೆಡಲ್ , ಎರಡು
ಮೂರು ಸಿಲಿಂಡರ ಅಳುತ್ತಾ ನಿಂತಿವೆ. ತನ್ನ ಪರಿಚಯದ ನುರಿತ ಪತ್ರಿ
ಕೋದ್ಯಮಿಗಳೂ ಸಾಹಿತಿ ಪತ್ರಿಕೋದ್ಯೋಗಿಗಳೂ ಅಲ್ಲಿ ಕಸಗುಡಿಸು
ತ್ತಿದ್ದಾರೆ.
__ತಾನು ನಿಂತಿರುವುದು ಒಂದು ಮೂಲೆಯಲ್ಲಿ. ‌ಮೈಮೆಲೆ ಕೌಪೀ
ನದ ಹೊರತು ಬೇರೆ ಬಟ್ಟಿಯಿಲ್ಲ. ತಲೆಯ ಮೇಲೆ ಜುಟ್ಟಿದೆ. ಯಾವು
ಯಾವುದೋ ದಾರ ಕೊರಳಲ್ಲಿದೆ. ತಾನು ಹುಡುಗನಾಗಿದ್ದಾಗ ಇದ್ದಂತೆ.
__ಯಾವನೋ‌‌ ಒಬ್ಬ ಭೂಪತಿ ಎತ್ತರದಲ್ಲಿ‌ ದೂರದಲ್ಲಿ ಕೂತು ನಗು
ತ್ತಿದ್ದಾನೆ. ತಿಂದು ಬೆಳೆದ ಹಿರಿ ದೇಹ. ಆ ಮುಖಕ್ಕೆ ರೂಪವಿಲ್ಲ. ಬಣ್ಣವೋ
ಗೋದಿಗೆಂಪು ಅರಚುತ್ತಿದ್ದಾನೆ, " ಏ ಹುಡುಗ!"
__ತಾನು ಹುಡುಗನಲ್ಲ, ತನಗೆ ಮಗುವಿದೆ, ಎನ್ನಲು ಆನಂದ
ಯತ್ನಿಸುತ್ತಾನೆ. ಮಾತು ಹೊರಡುವುದಿಲ್ಲ. ಓಡಲೆತ್ನಿಸುತ್ತಾನೆ. ಆದರೆ

ಬಾಗಿಲ ಬಳಿ ಪಠಾಣ ಕಾವಲುಗಾರರಿದ್ದಾರೆ. ಎತ್ತ ಓಡಿದರೂ ರೋಟರಿ

೩೦

ಅನ್ನಪೂರ್ಣಾ

ನಗುತ್ತ ತನ್ನ ಹಿಂದೆಯೇ ಬಂದಂತೆ ಭಾಸವಾಗುತ್ತದೆ. ತತ್ತರಿಸುತ್ತ
ಆತ ಅಲ್ಲಿಯೇ ನಿಂತು ಬಿಡುತ್ತಾನೆ....ರೋಟರಿಯ ಕೆಳಗೆ.
****
ಮೇ ದಿನಾಂಕ ಮೂರು. ಬೆಳಗಾಗಿದೆ. ಬೆಳಗಾಗಿರಲೇಬೇಕು ಎಂದು
ಆನಂದ್ ಮುಖವನ್ನು ಅರ್ಧ ಮರೆಮಾಡಿದ್ದ ಮುಸುಕಿನೊಳಗಿಂದಲೇ ಕಣ್ಣು
ತೆರೆಯದೆ ಯೋಚಿಸುತ್ತಿದ್ದಾನೆ. ಎರಡು ವರ್ಷದ ಮಗು ಎದ್ದು ಕುಳಿತು
ಚೀರಾಡುತ್ತಿದೆ. ತಾರಾ ಭುಜ ಕುಲುಕುತ್ತಾ ಎಬ್ಬಿಸುತ್ತಿದ್ದಾಳೆ.
"ಏಳೀಂದ್ರೆ....ಏಳೀಂದ್ರೆ...."
"ಹೂ....ಊಂ...."
ಕಾಲುಗಳು ಸೆಳೆಯುತ್ತಿವೆ. ಕಾರಬೆರಳುಗಳು ನೆಟಿಕೆಗಾಗಿ‌ ಹಾತೊರೆ
ಯುತ್ತಿವೆ. ಕ್ಷೀಣಗೊಂಡ ದೇಹ, " ಇನ್ನಿಷ್ಟು ಇನ್ನಿಷ್ಟು ನಿದ್ದೆ " ಎಂದು
ಕರೆದು ಕೇಳುತ್ತಿದೆ.
ಆದರೊ ಏಳಲೇಬೇಕು.
‌‌‌‌ತಾರಾ ಹೇಳುತ್ತಿದ್ದಾಳೆ: "ಈ ದಿವಸ ಕಾಫೀ ಪುಡೀನೂ ಇಲ್ಲಾಂದ್ರೆ..."
"ಹೂಂ....ಹಾಲೆಲ್ಲಾ ಮಗೂಗೆ ಕುಡಿಸು ತಾರಾ. ಬರೇ ಬಿಸಿ ನೀರು
ನಮ್ಮಿಬ್ಬರಿಗೂ....ಮುಂದೆ ನೋಡೋಣವಂತೆ ಕಾಫೀಪುಡಿ ಸಕ್ಕರೆ ದೊರೆಯುವ
ದಿನ ಬಂದೀತು!"
ದ್ರುಷ್ಟಿ, ಹರಿದು ಚಲಾಪಿಲ್ಲಿಯಾಗಿದ್ದ "ಅಮೆರಿಕನ್ ರಿಪೋರ್ಟರ್"
ನತ್ತಹೋಯಿತು. ಕೈ, ಕಾರ್ಯನಿರತ ಪತ್ರಿಕೋದ್ಯಮಿಗಳ ನಾಯಕ ಚಲಪತಿ
ರಾಯರ ಮುದ್ರಿತಭಾಷಣದತ್ತ ಸಾಗಿತ್ತು.
ಮತ್ತೆ ಆ ಆಸೆ....ಸಂಘಟನೆ, ಹೋರಾಟ, ಯಶಸ್ಸು, ಮಾನವನಾಗಿ
ಬಾಳುವ ಸಾಧ್ಯತೆ....ಕಾಫೀಪುಡಿ, ಸಕ್ಕರೆ, ಹಾಲು ಎಲ್ಲವೂ ಸೇರಿ ಸಿದ್ಧವಾದ
ಕಾಫಿ........