ಅನ್ನಪೂರ್ಣ - ಕನ್ನಡವೇ ತಾಯ್ನುಡಿಯು

ವಿಕಿಸೋರ್ಸ್ ಇಂದ
Jump to navigation Jump to search

ಸಾಹಿತ್ಯ : ಚಿ.ಉದಯಶಂಕರ್

ಸಂಗೀತ : ರಾಜನ್-ನಾಗೇಂದ್ರ

ಗಾಯನ : ಪಿ.ಬಿ.ಶ್ರೀನಿವಾಸ್


ಪರಿಪರಿಯ ಪರಿಮಳದಿ ಅತಿಶೇಷ್ಠವೆನಿಸಿಹುದು ಕಸ್ತೂರಿಯು

ನುಡಿಗಳಲಿ ಅತಿಮಧುರವೆನಿಸಿಹುದು ಕನ್ನಡನುಡಿಯು.. ಸಿರಿಗನ್ನಡದ ನುಡಿಯು...


ಕನ್ನಡವೆ ತಾಯ್ನುಡಿಯು ಕರುನಾಡು ತಾಯ್ನಾಡು

ಕನ್ನಡಿಗನು ನೀನೆಂಬ ಅಭಿಮಾನವಿರಲಿ.....


ನದಿಗಳೆನಿತೋ ಹರಿದೂ ತಾಯ ಪಾದ ತೊಳೆದು

ಜನ್ಮಸಾರ್ಥಕ ಪಡೆವ ನಾಡೆ ನಿನ್ನದು..

ಆ.....ಆ.....ಆ.....

ಹರಿಹರರು ಒಂದೆಂದು ನುಡಿದವರ ನೆಲೆವೀಡು

ಕಾವ್ಯಗಂಗೆ ಹರಿವ ಪುಣ್ಯಭೂಮಿ ನಿನ್ನದು..ಪುಣ್ಯ ಭೂಮಿ ನಿನ್ನದು.....{ಪಲ್ಲವಿ}


ಶಿಲೆಯಲ್ಲಿ ಕಲೆಯನ್ನು ಕಡೆದವರ ಸಿರಿನಾಡು

ಲಲಿತಕಲೆಗಳಾ ಭವ್ಯಗುಡಿಯು ನಿನ್ನದು

ನಾಡುನುಡಿಯ ಮೇಲ್ಮೆಗೇ ಜೀವತೊರೆದು ದೇಶಕೆ

ಕೀರ್ತಿತಂದ ವೀರರಿತ್ತ ಭೂಮಿ ನಿನ್ನದು...ವೀರಭೂಮಿ ನಿನ್ನದು.....{ಪಲ್ಲವಿ}