ಅಪರವಿಲ್ಲದಂದು, ಪರಬ್ರಹ್ಮವಿಲ್ಲದಂದು ಆದಿಯಿಲ್ಲದಂದು

ವಿಕಿಸೋರ್ಸ್ದಿಂದ



Pages   (key to Page Status)   


ಅಪರವಿಲ್ಲದಂದು
ಪರಬ್ರಹ್ಮವಿಲ್ಲದಂದು ಆದಿಯಿಲ್ಲದಂದು ಅನಾದಿಯಿಲ್ಲದಂದು ಸದಾಶಿವನಿಲ್ಲದಂದು ಶಿವನಿಲ್ಲದಂದು ಆನು ನೀನೆಂಬುದು ತಾನಿಲ್ಲದಂದು ಕೂಡಲಚೆನ್ನಸಂಗಯ್ಯ ಏನೂ ಎನ್ನದಿರ್ದನಂದು