ಅಪ್ಪಿನಲಾದ ಘಟವು ಅರ್ಪಿತದಲೆ ಲೀಯ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಪ್ಪಿನಲಾದ ಘಟವು ಅರ್ಪಿತದಲೆ ಲೀಯ, ಇಪ್ಪತ್ತೈದೆಂದು ಕುರುಹಿಡುವೆ ಏಕೆಲೆ ಮನುಜಾ. ತಾ ಹುಟ್ಟಿ ತಮ್ಮವ್ವೆ ಬಂಜೆಯೆಂಬ ನ್ಯಾಯದಲ್ಲಿ ಬೇರೆ ವಿವರಿಸಿ ತೋರಬಲ್ಲಡದು ಯೋಗ. ಅಭ್ಯಾಸಸಮಾದ್ಥಿಯಿಂ ಅನುಭವಿಗಳೆಲ್ಲರಿಗೆ ಬಯಲ ಸಮಾದ್ಥಿಯಾಗದಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನ .