ಅಮಳೋಕ್ಯದಲ್ಲಿ ಲಿಂಗವ ಧರಿಸುವರೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಮಳೋಕ್ಯದಲ್ಲಿ ಲಿಂಗವ ಧರಿಸುವರೆ ಅನ್ನ ಪಾನಾದಿಗಳ ಹಂಗಳಿಯಬೇಕು
ಅಹಂಕಾರ ಮದಂಗಳಳಿಯಬೇಕು
ಜ್ಞಾನ ವಿಸ್ತಾರ ಪರಿಪೂರ್ಣನಾಗಿರಬೇಕು
ಅನುಭಾವ ಘನಮನವೇದ್ಯನಾಗಬೇಕು
ಕಾಮದ ಕಣ್ಣರಿಯದಿರಬೇಕು
ಶಬ್ದ ನಿಶ್ಶಬ್ಧವಾಗಬೇಕು
ಮಹದಾಶ್ರಯದಲ್ಲಿ ಮನವು ಲೀಯವಾಗಬೇಕು. ಕೂಡಲಚೆನ್ನಸಂಗನಲ್ಲಿ ಏಕಾರ್ಥವಾಗಿರಬೇಕು