ಅಮೃತಕಲೆಯ ಸೂಡಿದವ ಅಂಬಲಿಯನುಂಬನೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಮೃತಕಲೆಯ ಸೂಡಿದವ ಅಂಬಲಿಯನುಂಬನೆ ? ಶಿವನಾರು ? ಮಾಂಸನಾರು ? ಚೋಳಿಯಕ್ಕನೆಂಜಲ
ಹಸಿದುಂಡನೆನಬಹುದೆ ? ಹಸುಳೆಯ ಕೈಯ ಹಾಲನಾರು ಕಿತ್ತುಕೊಂಬರು ? ಗುಹೇಶ್ವರಾ
ನೀನು ಭಕ್ತಿಪ್ರಿಯನೆಂಬುದ ಮೂರು ಲೋಕವರಿಯದೆ ?