ಅಮೇಧ್ಯವ ಭುಂಜಿಸುವ ಸೂಕರ
ಗೋಚರ
ಲೇಖಕರು: ತೊಂಟದ ಸಿದ್ಧಲಿಂಗೇಶ್ವರ ಶಿವಯೋಗಿಗಳು
ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಅಮೇಧ್ಯವ ಭುಂಜಿಸುವ ಸೂಕರ ಅಮೃತದ ಸವಿಯನೆತ್ತಬಲ್ಲುದಯ್ಯ? ಗೆಜ್ಜಲ ತಿಂಬ ಕರಡಿ ಖರ್ಜೂರದ ಹಣ್ಣಿನ ಸವಿಯನೆತ್ತಬಲ್ಲುದಯ್ಯ? ಬೇವ ತಿಂಬ ಕಾಗೆ ಬೆಲ್ಲದ ಸವಿಯನೆತ್ತ ಬಲ್ಲುದಯ್ಯ? ಅಂಗನೆಯರ ಸಮ್ಮೇಳನದ ವಿಕಾರದ ಭಂಗಿಯ ಕೊಂಡು ಮೈಮರೆದ ಮನುಜರು ಲಿಂಗಪ್ರೇಮದ ಸುಖವನಿವರೆತ್ತಬಲ್ಲರಯ್ಯಾ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.