Library-logo-blue-outline.png
View-refresh.svg
Transclusion_Status_Detection_Tool

ಅಯ್ಯಾ, ಆದಿಸೃಷ್ಟಿಯಿಂದ ಇಂದು

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಅಯ್ಯಾ
ಆದಿಸೃಷ್ಟಿಯಿಂದ ಇಂದು ಪರ್ಯಂತವೂ ನಾನಾ ಯೋನಿಯಲ್ಲಿ ಹುಟ್ಟಿ ಹುಟ್ಟಿ ಬಳಲಿ ಬಾಯಾರಿದವಂಗೆ ಅಂಧ ಟಿಟ್ಟಿಭ ನ್ಯಾಯದಂತೆ ಅಕಸ್ಮಾತ್ ಅರಿವುಳ್ಳ ನರಜನ್ಮವು ದೊರೆವುದೆ ದುರ್ಲಭ ಅದರಲ್ಲಿಯೂ ಶೈವಕುಲದಲ್ಲಿ ಜನ್ಮವೆತ್ತಿರ್ಪುದು ಅತಿ ದುರ್ಲಭ. ಅದಕ್ಕಿಂತಲೂ ವೀರಶೈವವಂಶದಲ್ಲಿ ಜನಿಸಿಹುದು ಅತ್ಯಂತ ದುರ್ಲಭವಾಗಿರ್ಪುದು ಕಾಣಾ. ಕಿಮಸ್ತಿ ಬಹುನೋಕ್ತೇನ ಮಾನುಷಂ ಜನ್ಮ ದುರ್ಲಭಂ ತತ್ರಾಪಿ ದುರ್ಲಭಂ ಜನ್ಮ ಕುಲೇ ಶೈವಸ್ಯ ಕಸ್ಯಚಿತ್ ವೀರಶೈವಾನ್ವಯೇ ಜನ್ಮ ಪರಮಂ ದುರ್ಲಭಂ ಸ್ಮೃತಂ_ಎಂದುದಾಗಿ ಸಕಲ ಪ್ರಾಣಿಗಳಲ್ಲಿ ವೀರಶೈವನೆ ಸರ್ವೋತ್ತಮನಯ್ಯಾ ಕೂಡಲಚೆನ್ನಸಂಗಮದೇವಾ.