ಅಯ್ಯಾ, ಕರ್ಮದಾಗರವ ಹೊಕ್ಕು,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಯ್ಯಾ
ಕರ್ಮದಾಗರವ ಹೊಕ್ಕು
ವಿಷಯದ ಬಲೆಯಲ್ಲಿ ಸಿಲುಕಿ
ದೇಹಮೋಹವೆಂಬ ಮಹಾದುಃಖಕ್ಕೀಡಾಗಿ ಸಾವುತ್ತಿದ್ದೇನೆ
ಬೇವುತ್ತಿದ್ದೇನೆ. ಅಯ್ಯಾ ತಪ್ಪೆನ್ನದು ತಪ್ಪೆನ್ನದು ಈ ಮೊರೆಯ ವಿಚಾರಿಸಿ ಕಾರುಣ್ಯವ ಮಾಡು
ಕಾರುಣ್ಯವ ಮಾಡು. ಅಯ್ಯಾ ಆಳಿನಪಮಾನ ಆಳ್ದಂಗೆಂಬಂತೆ
ಎನ್ನಳಲು ನಿಮಗೆ ತಪ್ಪದು. ಕಾರುಣ್ಯವ ಮಾಡು
ಅಯ್ಯಾ ಕಾರುಣ್ಯವ ಮಾಡು
ಕೂಡಲಚೆನ್ನಸಂಗಮದೇವಾ.