ಅಯ್ಯಾ, ಕೊನೆಯಲ್ಲಿ ನಿಮ್ಮನೆನ್ನ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಯ್ಯಾ
ನಿಮ್ಮನೆನ್ನ ಕರಸ್ಥಲದಲ್ಲಿ ನೋಡಿದಡೆ ನೀವೆನ್ನ ಕಂಗಳ ಕೊನೆಯಲ್ಲಿ ತೋರುತಿರ್ಪಿರಿ : ಇದೇನು ನಿಮ್ಮ ಗಾರುಡವಯ್ಯಾ ! ಅಯ್ಯಾ
ನಿಮ್ಮನೆನ್ನ ಕಂಗಳ ಕೊನೆಯಲ್ಲಿ ನೋಡಿದಡೆ ನೀವೆನ್ನ ಮನದ ಕೊನೆಯಲ್ಲಿ ತೋರುತಿರ್ಪಿರಿ : ಇದೇನು ನಿಮ್ಮ ಗಾರುಡವಯ್ಯಾ ! ಅಯ್ಯಾ
ನಿಮ್ಮನೆನ್ನ ಮನದ ಕೊನೆಯಲ್ಲಿ ನೋಡಿದಡೆ ನೀವೆನ್ನ ಪಂಚಮುಖದಲ್ಲಿ ತೋರುತಿರ್ಪಿರಿ : ಇದೇನು ನಿಮ್ಮ ಗಾರುಡವಯ್ಯಾ ! ಅಯ್ಯಾ
ನಿಮ್ಮನೆನ್ನ ನೆನಹಿನ ಪಂಚಮುಖದಲ್ಲಿ ನೋಡಿದಡೆ ನೀವೆನ್ನ ನವಚಕ್ರದಲ್ಲಿ ತೋರುತಿರ್ಪಿರಿ : ಇದೇನು ನಿಮ್ಮ ಗಾರುಡವಯ್ಯಾ ! ಅಯ್ಯಾ
ನಿಮ್ಮನೆನ್ನ ನವಚಕ್ರದಲ್ಲಿ ನೋಡಿದಡೆ ನೀವೆನ್ನ ಸರ್ವಾಂಗದಲ್ಲಿ ತೋರುತಿರ್ಪಿರಿ : ಇದೇನು ನಿಮ್ಮ ಗಾರುಡವಯ್ಯಾ ಅಖಂಡೇಶ್ವರಾ !