ಅಯ್ಯಾ, ವಾಕ್ಕನೂ ಮೀರಿ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಯ್ಯಾ
ವಾಕ್ಕನೂ ಮೀರಿ
ಮನಸ್ಸನೂ ಮೀರಿ
ಅಕ್ಷರಂಗಳನೂ ಮೀರಿ
ಜ್ಞಾನವನೂ ಮೀರಿ ತೋರುವ ನಿರುಪಮವಸ್ತುವೆಂಬುತಿದ್ದಿರಿ: ಅದು ರೂಪಾಗಿ
ಎನ್ನ ಕರಸ್ಥಲಕ್ಕೆ ಇಷ್ಟ
ಮನಸ್ಥಲಕ್ಕೆ ಪ್ರಾಣವಾಗಿ
ಭಾವದಲ್ಲಿ ಭರಿತವಾಗಿ
ತೀವಿ ಪರಿಪೂರ್ಣವಾಗಿ
ಎಡೆಗಡೆಯಿಲ್ಲದೆಯಿಪ್ಪ ಭೇದವ ಕರುಣಿಸಿದಿರಿಯಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.