ವಿಷಯಕ್ಕೆ ಹೋಗು

ಅಯ್ಯಾ, ಸಜ್ಜನ ಸದ್ಭಾವಿಗಳ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ಅಯ್ಯಾ
ಸಜ್ಜನ ಸದ್ಭಾವಿಗಳ ಸಂಗದಿಂದ ಮಹಾನುಭಾವಿಗಳ ಕಾಣಬಹುದು
ಮಹಾನುಭಾವಿಗಳ ಸಂಗದಿಂದ ಶ್ರೀಗುರುವ ಕಾಣಬಹುದು
ಶ್ರೀಗುರುವಿನ ಸಂಗದಿಂದ ಲಿಂಗವ ಕಾಣಬಹುದು
ಲಿಂಗಸಂಗದಿಂದ ಜಂಗಮವ ಕಾಣಬಹುದು. ಜಂಗಮಸಂಗದಿಂದ ಪ್ರಸಾದವ ಕಾಣಬಹುದು
ಪ್ರಸಾದದಿಂದ ಆಚಾರವ ಕಾಣಬಹುದಯ್ಯಾ. ಆಚಾರದಿಂದ ತನ್ನ ಕಾಣಬಹುದಯ್ಯಾ ಇದು ಕಾರಣ ಕೂಡಲಚೆನ್ನಸಂಗಮದೇವಾ
ನಿಮ್ಮ ಸಜ್ಜನ ಸದ್ಭಾವಿಗಳ ಸಂಗವನೆ ಕರುಣಿಸಯ್ಯಾ ನಿಮ್ಮ ಧರ್ಮ.