ವಿಷಯಕ್ಕೆ ಹೋಗು

ಅಯ್ಯಾ, (ಆಯತ) ಲಿಂಗದಲ್ಲಿ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ಅಯ್ಯಾ
(ಆಯತ) ಲಿಂಗದಲ್ಲಿ ಆಗಾಗಿ ಆಚಾರಲಿಂಗಪ್ರಾಣಿಯಾದ
ಆಚಾರಲಿಂಗದಲ್ಲಿ ಅವಧಾನಿಯಾಗಿ ಸರ್ವಾಚಾರಸಂಪನ್ನನಾದ
ಸರ್ವಾಚಾರಸಂಪತ್ತಿನಲ್ಲಿ ಲಿಂಗೈಕ್ಯವಾಗಿಪ್ಪನು. ಕೂಡಲಚೆನ್ನಸಂಗನಲ್ಲಿ ಸಂಗನಬಸವಣ್ಣನು ಆಚಾರವ ಬಲ್ಲನಲ್ಲದೆ ನಾನೆತ್ತ ಬಲ್ಲೆನಯ್ಯಾ ಪ್ರಭುವೆ ?