ಅಯ್ಯಾ ಜಲ, ಕೂರ್ಮ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಯ್ಯಾ ಜಲ
ಕೂರ್ಮ
ಗಜ
ಫಣಿಯ ಮೇಲೆ ಧರೆ ವಿಸ್ತರಿಸಿ ನಿಲ್ಲದಂದು
ಗಗನವಿಲ್ಲದಂದು
ಪವನನ ಸುಳುಹಿಲ್ಲದಂದು
ಅಗ್ನಿಗೆ ಕಳೆದೋರದಂದು
ತರು ಗಿರಿ ತೃಣ ಕಾಷಾ*ದಿಗಳಿಲ್ಲದಂದು
ಯುಗ ಜುಗ
ಮಿಗಿಲೆನಿಸಿದ ಹದಿನಾಲ್ಕು ಭುವನ ನೆಲೆಗೊಳ್ಳದಂದು
ನಿಜವನರಿದೆನೆಂಬ ತ್ರಿಜಗಾಧಿಪತಿಗಳಿಲ್ಲದಂದು ತೋರುವ ಬೀರುವ ಭಾವದ ಪರಿ
ಭಾವದಲ್ಲಿ ಭರಿತ
ಆಗಮ್ಯ ಗುಹೇಶ್ವರ ನಿರಾಳವು !