ವಿಷಯಕ್ಕೆ ಹೋಗು

ಅಯ್ಯಾ ಶ್ರೀಮಹಾವಿಭೂತಿಯಿಂದ ಕಂಡೆ

ವಿಕಿಸೋರ್ಸ್ದಿಂದ
ಲೇಖಕರು: ಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya

ಅಯ್ಯಾ

ಶ್ರೀಮಹಾವಿಭೂತಿಯಿಂದ ಕಂಡೆ ಆ ನಿಮ್ಮ ದಿವ್ಯ ಬೆಳಗಿನ ಹೊಳಹ
ಈ ಎನ್ನ ಕರಸ್ಥಲದೊಳಗೆ. ಅಯ್ಯಾ
ಶ್ರೀಮಹಾರುದ್ರಾಕ್ಷಿಯಿಂದ ಕಂಡೆ ಆ ನಿಮ್ಮ ದಿವ್ಯಮೂರ್ತಿಯ ಗೂಢವ
ಈ ಎನ್ನ ಕರಸ್ಥಲದೊಳಗೆ. ಅಯ್ಯಾ
ಶ್ರೀಮಹಾಪಂಚಾಕ್ಷರಿಯಿಂದ ಕಂಡೆ ಆ ನಿಮ್ಮ ದಿವ್ಯವಕ್ತ್ರಂಗಳ
ಈ ಎನ್ನ ಕರಸ್ಥಲದೊಳಗೆ. ನಾ ಬಯಸುವ ಬಯಕೆ ಕೈಸಾರಿತ್ತಿಂದು ಕೂಡಲಸಂಗಮದೇವಾ.