ಅಯ್ಯ ! ಜ್ಞಾನೇಂದ್ರಿಯ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಯ್ಯ ! ಜ್ಞಾನೇಂದ್ರಿಯ
ಕರ್ಮೇಂದ್ರಿಯ
ವಿಷಯಂಗಳು
ಕರಣ ಮುಂತಾದವರ ಆಶಾಪಾಶಂಗಳನುಳಿದು ನುಡಿಯಂತೆ ನಡೆ
ನಡೆಯಂತೆ ನುಡಿ_ದೃಢಚಿತ್ತದಿಂದ ಘಟ್ಟಿಗೊಂಡು
ಹಿಂದೆ ಹೇಳಿದ ಸದ್ಭಕ್ತ_ಮಹೇಶ್ವರ_ಪ್ರಸಾದಿ_ಪ್ರಾಣಲಿಂಗಿ ಸ್ಥಲಂಗಳ ನೊಳಗುಮಾಡಿಕೊಂಡು
ಪರಮಪರಿಣಾಮಿ ಅಚಲಾನಂದಮೂರ್ತಿಯಾಗಿ
ಝಗಝಗಿಸಿ ನೆಲಸಿರ್ಪ ಶಿವಶರಣನಂತರಂಗದಲ್ಲಿ
ಚಿನ್ಮಯಪರನಾದ ಸ್ವಯಂಭು ಲೀಲೆಯಿಂ
ಮಿಶ್ರಾಮಿಶ್ರಂಗಳೊಡನೆ ಕೂಡಿದ
ಸಕಲ ತತ್ತ್ವಂಗಳನೊಳಕೊಂಡು
ಹದಿಮೂರುಸ್ಥಲಂಗಳ ಗರ್ಭೀಕರಿಸಿಕೊಂಡು
ಆರುಸಾವಿರದ ಒಂಬೈನೂರ ಹನ್ನೆರಡು ಮಂತ್ರ ಮಾಲೆಗಳ ಪಿಡಿದುಕೊಂಡು
ಇಪ್ಪತ್ತುನಾಲ್ಕು ಸಕೀಲಗರ್ಭದಿಂ ಕ್ಷೀರಕ್ಷೀರ ಬೆರದು ಭಿನ್ನದೋರದ ಹಾಂಗೆ
ಏಕರೂಪಿನಿಂದೆ ಈಳನಸ್ವರೂಪ ಪ್ರಸಾದಲಿಂಗಮೂರ್ತಿಯಾಗಿ [ನೆಲಸಿರ್ಪುದು] ನೋಡ ! ನಿರವಯಶೂನ್ಯಲಿಂಗಮೂರ್ತಿ ಗುಹೇಶ್ವರಲಿಂಗವು ಚೆನ್ನಬಸವಣ್ಣ.