ವಿಷಯಕ್ಕೆ ಹೋಗು

ಅಯ್ಯ ! ದರಿದ್ರನಲ್ಲ

ವಿಕಿಸೋರ್ಸ್ದಿಂದ


Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಅಯ್ಯ
!
ದರಿದ್ರನಲ್ಲ
ಧನಿಕನಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ
ಕುಚಿತ್ತದವನಲ್ಲ
ಸುಚಿತ್ತದವನಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ
ಕುಬುದ್ಧಿಯವನಲ್ಲ
ಸುಬುದ್ಧಿಯವನಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ
ಅಹಂಕಾರಿಯಲ್ಲ
ನಿರಹಂಕಾರಿಯವನಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ
ಕುಮನದವನಲ್ಲ
ಸುಮನದವನಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ
ಅಜ್ಞಾನದವನಲ್ಲ
ಸುಜ್ಞಾನದವನಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ
ದುರ್ಭಾವದವನಲ್ಲ
ಸದ್ಭಾವದವನಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ
ಸಕಲನಲ್ಲ
ನಿಃಕಲನಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ
ಅರ್ಪಿತನಲ್ಲ
ಅನರ್ಪಿತನಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ
ಆಹ್ವಾನನಲ್ಲ
ವಿಸರ್ಜನನಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ
ಇಂತು
ಉಭಯವಳಿದು
ಬೆಳಗುವ
ಸಂಗನಬಸವಣ್ಣನ
ಕರನಯನದಲ್ಲಿ
ಝಗಝಗಿಸುವ
ಗುಹೇಶ್ವರಲಿಂಗವು
ತಾನೆ
ನೋಡ
!
ಚೆನ್ನಬಸವಣ್ಣ.