ಅಯ್ಯ
!
ನಾಟಕನಲ್ಲ
ಬೂಟಕನಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ.
ಶೀಲಿಗನಲ್ಲ
ಕಪಟನಾಟಕನಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ.
ರುಂಡಮಾಲಿಗನಲ್ಲ
ಗುಂಡುಗಾಸಿಗನಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ.
ಪುಲಿಚರ್ಮನಲ್ಲ
ಗಜಚರ್ಮನಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ.
ದಕ್ಷಾಧ್ವರಸಂಹರನಲ್ಲ
ತ್ರಿಪುರಾರಿಯಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ.
ನಂದಿವಾಹನನಲ್ಲ
ಭೃಂಗಿಸ್ತುತನಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ.
ಸರ್ಪಧರನಲ್ಲ
ಚಂದ್ರಶೇಖರನಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ.
ಗಂಗಾಧರನಲ್ಲ
ಗೌರಿಪ್ರಿಯನಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ.
ಗಿರಿಜಾವಲ್ಲಭನಲ್ಲ
ಪಾರ್ವತಿಪ್ರಿಯನಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ.
ಯೋಗಿಯಲ್ಲ
ಜೋಗಿಯಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ.
ಶ್ರವಣನಲ್ಲ
ಸನ್ಯಾಸಿಯಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ.
ಕಾಳಾಮುಖಿಯಲ್ಲ
ಪಾಶುಪತಿಯಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ.
ಇಂತು
ಉಭಯವಳಿದ
ಸಂಗನಬಸವಣ್ಣನ
ಸರ್ವಾಂಗದಿ
ಬೆಳಗುವ
ಮಹಾಜ್ಯೋತಿ
ತಾನೆ
ನೋಡ
!
ಗುಹೇಶ್ವರಲಿಂಗವು
ಚೆನ್ನಬಸವಣ್ಣ.