ಅಯ್ಯ ! ನಿಜವಸ್ತು
ಗೋಚರ
ಲೇಖಕರು: ಅಲ್ಲಮ ಪ್ರಭು
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಅಯ್ಯ ! ನಿಜವಸ್ತು ನೆಲೆಸಿರ್ಪ ನೇತ್ರವೇ ಗುಹ್ಯಕ್ಕೆ ಗುಹ್ಯ
ಗೋಪ್ಯಕ್ಕೆ ಗೋಪ್ಯ ರಹಸ್ಯಕ್ಕೆ ರಹಸ್ಯ
ಕೂಟಕ್ಕೆ ಕೂಟ ನೋಟಕ್ಕೆ ನೋಟ
ಬೇಟಕ್ಕೆ ಬೇಟ. ಅದೆಂತೆಂದಡೆ: ಲಿಂಗಸ್ಯ ಸಾಯಕಂ ನೇತ್ರಂ ಚುಕ್ಷುರ್ಲಿಂಗಸ್ಯ ಚಕ್ಷುಸಃ ಇಂತೆಂದುದಾಗಿ
ಗುರುಕಟಾಕ್ಷೆಯಿಂದ ಇಷ್ಟ_ಪ್ರಾಣ_ಭಾವಲಿಂಗ ಸಂಬಂಧವಾದ ಮಹಾಘನ ಚಕ್ಷುವೆ ಗುಹೇಶ್ವರಲಿಂಗಕ್ಕೆ ಮಹಾಪ್ರಸಾದ ನೋಡಾ ಸಿದ್ಧರಾಮಯ್ಯಾ.