ವಿಷಯಕ್ಕೆ ಹೋಗು

ಅಯ್ಯ ! ಸಗುಣಿಯಲ್ಲ

ವಿಕಿಸೋರ್ಸ್ದಿಂದ


Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಅಯ್ಯ
!
ಸಗುಣಿಯಲ್ಲ
ನಿರ್ಗುಣಿಯಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ
ಪರಮನಲ್ಲ
ಜೀವನಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ
ಅಹುದೆನ್ನ
ಅಲ್ಲವೆನ್ನ
ನೋಡ
!
ನಿರವಯಶೂನ್ಯಲಿಂಗಮೂರ್ತಿ
ನಾನು
ಎನ್ನ
ನೀನು
ಎನ್ನ
ನೋಡ
!
ನಿರವಯಶೂನ್ಯಲಿಂಗಮೂರ್ತಿ
ಸೂಕ್ಷ್ಮನಲ್ಲ
ಸ್ಥೂಲನಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ
ಯೋಗದವನಲ್ಲ
ಭೋಗದವನಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ
ಮಾಡುವೆ
[ನೆನ್ನ]
ಮಾಡಿಸಿಕೊಂಬೆನೆನ್ನ
ನೋಡ
!
ನಿರವಯಶೂನ್ಯಲಿಂಗಮೂರ್ತಿ
ಸುಶಬ್ದದವನಲ್ಲ
ಕುಶಬ್ದದವನಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ
ಸುಸ್ಪರ್ಶನದವನಲ್ಲ
ಕುಸ್ಪರ್ಶನದವನಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ
ಸುರೂಪದವನಲ್ಲ
ಕುರೂಪದವನಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ
ಸುರುಚಿಯವನಲ್ಲ
ಕುರುಚಿಯವನಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ
ಸುಗಂಧದವನಲ್ಲ
ದುರ್ಗಂಧದವನಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ
ಇಂತು
ಉಭಯವಳಿದು
ಸಂಗನಬಸವಣ್ಣನ
ಕರ_ಮನ_ಭಾವಂಗಳಲ್ಲಿ
ಬೆಳಗುವ
ಪರಂಜ್ಯೋತಿ
ತಾನೆ
ನೋಡ
!
ಗುಹೇಶ್ವರಲಿಂಗವು
ಚೆನ್ನಬಸವಣ್ಣ.