Library-logo-blue-outline.png
View-refresh.svg
Transclusion_Status_Detection_Tool

ಅಯ್ಯ ಸದಾಚಾರ ಸದ್ಭಕ್ತಿವಿಡಿದಾಚರಿಸಿದ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಅಯ್ಯ
ಸದಾಚಾರ
ಸದ್ಭಕ್ತಿವಿಡಿದಾಚರಿಸಿದ
ಗುರುವೆ
ಪರಾತ್ಪರಬ್ರಹ್ಮನೋಡಾ.

ಗುರುವಿನಿಂದ
ತ್ರಿವಿಧದೀಕ್ಷೆಯ
ಪಡೆದ
ಶಿಷ್ಯೋತ್ತಮನೆ
ಮೋಕ್ಷಮಂದಿರನೋಡಾ.

ಶಿಷ್ಯೋತ್ತಮನ
ಕರ_ಮನ_ಭಾವದಲ್ಲಿ
ಪೂಜೆಗೊಂಬ
ಲಿಂಗ_ಜಂಗಮವೆ
ನಿಷ್ಕಲ
ಪರಶಿವತತ್ವನೋಡಾ.

ಗುರು_ಶಿಷ್ಯ_ಲಿಂಗ_ಜಂಗಮದಡಿದಾವರೆಯೆ
ಗುಹೇಶ್ವರಲಿಂಗ
ಸಾಕ್ಷಿಯಾಗಿ
ಎನಗೂ
ನಿನಗೂ
ಅವಿಮುಕ್ತ
ಕ್ಷೇತ್ರ
ನೋಡಾ
ಚೆನ್ನಬಸವಣ್ಣ.