ಅರಗು ತಿಂದು ಕರಗುವ ದೈವವನೆಂತು ಸರಿಯೆಂಬೆನಯ್ಯಾ
ಗೋಚರ
ಲೇಖಕರು: ಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಅರಗು ತಿಂದು ಕರಗುವ ದೈವವನೆಂತು ಸರಿಯೆಂಬೆನಯ್ಯಾ
ಉರಿಯ ಕಂಡಡೆ ಮುರುಟುವ ದೈವವನೆಂತು ಸರಿಯೆಂಬೆನಯ್ಯಾ
ಅವಸರ ಬಂದಡೆ ಮಾರುವ ದೈವವನೆಂತು ಸರಿಯೆಂಬೆನಯ್ಯಾ
ಅಂಜಿಕೆಯಾದಡೆ ಹೂಳುವ ದೈವವನೆಂತು ಸರಿಯೆಂಬೆನಯ್ಯಾ
ಸಹಜಭಾವ ನಿಜೈಕ್ಯ ಕೂಡಲಸಂಗಮದೇವನೊಬ್ಬನೆ ದೇವ.
ಅರಗನ್ನು ಹೊಂದಿ ಕರಗುವಂತಹ ಬೆಂಕಿಗೆ. ಮುದ್ದೆಯಾಗುವ ಅಡಚಣೆ ಬಂದಾಗ ಮಾರಲು ಬರುವ ಅಂಜಿಸಿ ಅಂಜಿಸಿದರೆ ಮುಗಿಯಲು ಸಾಧ್ಯವಾಗುವ ದೇವತೆಗಳಿಗೆ ಯೋಗ್ಯ ಎಂದು ಎನ್ನಬಲ್ಲವೇ ಐಕ್ಯಕ್ಕೆ ಕಾರಣನು ಶ್ರೇಷ್ಠ ಮನೋಧರ್ಮಿಯು ಆದ ಕೂಡಲಸಂಗಮದೇವ ಒಬ್ಬನೇ ದೇವನು