ಅರಸಿನ ಭಕ್ತಿ ಅಹಂಕಾರದಿಂದ

ವಿಕಿಸೋರ್ಸ್ದಿಂದ



Pages   (key to Page Status)   


ಅರಸಿನ ಭಕ್ತಿ ಅಹಂಕಾರದಿಂದ ಕೆಟ್ಟಿತ್ತು
ಸೂಳೆಯ ಭಕ್ತಿ ಎಂಜಲ ತಿಂದಾಗಲೆ ಹೋಯಿತ್ತು
ನಂಟುತನದ ಭಕ್ತಿ ನಾಯಕನರಕ
ಬಡವನ ಭಕ್ತಿ ನಿಧಾನ- ಇದು ಕಾರಣ
ಕೂಡಲಚೆನ್ನಸಂಗಮದೇವಾ ನಿಮ್ಮ ಭಕ್ತರಿಗೆ ಬಡತನವನೆ ಕೊಡು.