ಅರಿತು ಭಜಿಪರ್ಯಾರಯ್ಯ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಅರಿತು ಭಜಿಪರ್ಯಾರಯ್ಯ ರಂಗಯ್ಯ ನಿನ್ನ |ಪ|

ಸಿರಿದೇವಿಯು ಕಿರುಬೆರಳಲ್ಲಿರುವ ಸೊಬಗನ್ನುಅರಿಯಲಾರಳೊ ದೇವ |ಅ|

ಇಂದಿರಾದೇವಿಯು ಅರಿಯಲಾರಳು ದೇವಬೃಂದಾರಕರೆಲ್ಲ ನಿಂದು ಯೋಚಿಪರುನಂದತೀರ್ಥರ ಮತದೊಳಗೆ ಬಂದವರೆಲ್ಲಎಂದಿಗಾದರು ಪರಮಾನಂದ ಪೊಂದುವರು |1|

ಮಾನವರು ಹೀನಮಾರ್ಗದೊಳು ಮುಳುಗಿಹರುಜ್ಞಾ ನಿಗಳು ನಿಂದು ಧ್ಯಾನಿಪರು ನಿನ್ನನೀನೆ ದಯಮಾಡಿ ಸಲಹೊ ಎನ್ನನು ಕೃಷ್ಣಕಾನನದೊಳು ಕಣ್ಣುಮುಚ್ಚಿ ಬಿಟ್ಟಿಹರೊ |2|

ಜಲದೊಳಗಿನ ಕಪ್ಪೆ ಜಲದ ಸವಿಯರಿಯದುಜಲದ ಸುಗಂಧವ ಜಲವರಿಯದುನೆಲೆಯ ಕಂಡವರ್ಯಾರು ನೆಲೆಯಾದಿಕೇಶವನೆಸುಲಲಿತ ತತ್ತ್ವವನು ಸುಲಭ ಮಾರ್ಗದಿ ತೋರೊ |3|