ಅರಿದೆವರಿದೆವೆಂಬಿರಿ ಅರಿದ ಪರಿಯೆಂತು ಹೇಳಿರೆ ? ಅರಿದವರು ಅರಿದೆವೆಂಬರೆ ? ಅರಿಯಬಾರದ ಘನವನರಿದು ಅರಿಯದಂತಿಪ್ಪರು ಗುಹೇಶ್ವರಾ.