ಅರಿವರತು ಬೆರಗುಹೊಡೆದು, ಕುರುಹುಗೆಟ್ಟವನ,

ವಿಕಿಸೋರ್ಸ್ದಿಂದ



Pages   (key to Page Status)   


ಅರಿವರತು ಬೆರಗುಹೊಡೆದು
ಕುರುಹುಗೆಟ್ಟವನ
ಬಂದ ಬಟ್ಟೆಯಲ್ಲಿ ಬಾರದೆ ಹೋದವನ
ಕಂಗಳಲುಂಡವನ
ಮನದಲ್ಲಿ ದಣಿದವನ
ಕಿಚ್ಚಿಲ್ಲದೆ ಬೆಂದವನ
ಅಚ್ಚಲಿಂಗೈಕ್ಯನ
ಕೈಯಿಲ್ಲದೆ ಕೊಂಡವನ
ಬಾಯಿಲ್ಲದೆ ಉಂಡವನ
ಒಡಲಿಲ್ಲದೆ ಅವಗ್ರಹಿಸಿದವನ_ನಂಬು ಗುಹೇಶ್ವರಲ್ಲಮನ !