ಅರಿವಿಂದರಿಯಬಾರದು ಕುರುಹುವಿಡಿದ ಪರಿಯೆಂತಯ್ಯಾ ? ತೆರಹಿಲ್ಲದ ಘನವನರಿದೆಹೆನೆಂದಡೆ ಅರಹು ಮರಹು ನಷ್ಟವಾದ ಮಹದರಿವು ತಾನಾಗಿ ಗುಹೇಶ್ವರಲಿಂಗವನರಿಯದಂತಿರಬೇಕು ಕಾಣಾ ಸಿದ್ಧರಾಮಯ್ಯ.