ಅರಿವಿನೊಳಗೊಂದು ಮರವೆಯದೆ ಮರವೆಯೊಳಗೊಂದು ಅರಿವದೆ. ಅರಿವು ಮರವೆಯೆಂಬೆರಡೂ ಅಳಿದಡೆ ನಿರ್ಣಯವದೆ (ನಿರ್ವಯಲಿದೆ?). ತಾನೆಂಬಲ್ಲಿ ನಿಷ್ಪತಿಯಿದೆ_ಇದೇನು ಹೇಳಾ ಗುಹೇಶ್ವರಾ?