ಅರಿವಿನ ಕುರುಹನರಿಯದೆ ತನುವ
ಗೋಚರ
ಲೇಖಕರು: ತೊಂಟದ ಸಿದ್ಧಲಿಂಗೇಶ್ವರ ಶಿವಯೋಗಿಗಳು
ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಅರಿವಿನ
ಕುರುಹನರಿಯದೆ
ತನುವ
ಕರಗಿಸಿ
ಮನವ
ಬಳಲಿಸಿದರೆ
ಏನು
ಪ್ರಯೋಜನವೋ?
ಇಂದ್ರಿಯವ
ನಿಗ್ರಹ
ಮಾಡಿ
ವಿಷಯಂಗಳ
ಬಂಧಿಸಿ
ಆತ್ಮಂಗೆ
ಬಂಧನವ
ಮಾಡಿದರೆ
ಆತ್ಮದ್ರೋಹ
ಕಾಣಿಭೋ.
ಹೀಂಗೆ
ಉದ್ದೇಶದಿಂದ
ತನುವ
ಒಣಗಿಸಿದರೆ
ಹಸಿಯ
ಮರನ
ತರಿದು
ಬಿಸಿಲಿಗೆ
ಹಾಕಿದಂತೆ.
ತನು
ಒಣಗಿದರೇನಯ್ಯ?
ಮನದ
ಮಲಿನ
ಹಿಂಗದು.
ಮನದ
ಮಲಿನ
ಹಿಂಗದನ್ನಕ್ಕರ
ಭವ
ಹಿಂಗಿತ್ತೆಂಬ
ಭಂಡರನೇನೆಂಬೆನಯ್ಯಾ?
ಮಹಾಲಿಂಗಗುರು
ಶಿವಸಿದ್ಧೇಶ್ವರ
ಪ್ರಭುವೇ.