ವಿಷಯಕ್ಕೆ ಹೋಗು

ಅರಿವಿನ ಬಲದಿಂದ ಕೆಲಬರು

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ಅರಿವಿನ ಬಲದಿಂದ ಕೆಲಬರು ಅರಿಯದವರ ಗೆಲಬೇಕೆಂದು
ಬರುಮಾತಿನ ಉಯ್ಯಲೆಯನೇರಿ
ಒದೆದು ಒರಲಿ ಕೆಡೆವ ದರಿದ್ರರು ! ಅರಿವು ತೋರದೆ ಇರಬೇಕು_ಕಾಯನಿರ್ಣಯ ನಿಃಪತಿಯೆಂಬಾತನು. ಸೋಂಕಿನ ಸೋಜಿಗವೆಂಬ ಪರಿಣತೆ ಫಲಿಸಬೇಕು
ಅರಿವು ತೋರದೆ ಎರಡೆಂಬ ಭಿನ್ನವೇಷವ ತೊಟ್ಟು ಡಂಬಕವ ನುಡಿದೆಹೆವೆಂಬ ಉದ್ದಂಡರ ಗುಹೇಶ್ವರ ಕಂಡರೆ ಕನಲುವ.