ವಿಷಯಕ್ಕೆ ಹೋಗು

ಅರಿವು ಮುಂತಾಗಿ ಕೊಂಬುದು

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ಅರಿವು ಮುಂತಾಗಿ ಕೊಂಬುದು ಪ್ರಸಾದವಲ್ಲ
ಲಿಂಗ ಮುಂತಾಗಿ ಕೊಂಬುದು ಪ್ರಸಾದವಲ್ಲ
ಜಂಗಮ ಮುಂತಾಗಿ ಕೊಂಬುದು ಪ್ರಸಾದವಲ್ಲ
ಸಯಜ್ಞಾನವಳಿದರೂ ಪ್ರಸಾದವಲ್ಲ
ಇವು ಏನೂ ಪ್ರಸಾದವಲ್ಲ
ಸಹಜಪ್ರಸಾದವೆ ಬೇಕು. ಅಂತಪ್ಪ ಪ್ರಸಾದಿಯ ತೋರಿ ಬದುಕಿಸಯ್ಯಾ ಕೂಡಲಚೆನ್ನಸಂಗಮದೇವಾ.