ವಿಷಯಕ್ಕೆ ಹೋಗು

ಅರ್ಥೇಷಣ ಪುತ್ರೇಷಣ ದಾರೇಷಣವೆಂಬ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ಅರ್ಥೇಷಣ ಪುತ್ರೇಷಣ ದಾರೇಷಣವೆಂಬ ಈಷಣತ್ರಯಂಗಳನೆ ಬಿಟ್ಟು
ಮಂಡೆ ಬೋಳಾದ ಬಳಿಕ ಮರಳಿ ಹೊನ್ನಿಂಗೆರಗಿದಡೆ ಗುರುದ್ರೋಹಿ
ಹೆಣ್ಣಿಂಗೆರಗಿದಡೆ ಲಿಂಗದ್ರೋಹಿ ಮಣ್ಣಿಂಗೆರಗಿದಡೆ (ಜಂಗಮದ್ರೋಹಿ)
ಆತ ಪೂರ್ವಾಚಾರಿಯಲ್ಲ. ``ಸ್ಥಾವರಂ ಭಿನ್ನದೋಷೇಣ ವ್ರತಭ್ರಂಶೇನ ಜಂಗಮಃ ಉಭಯೊರ್ಭಿನ್ನಭಾವೇನ ನ ಚಾರ್ಚಾ ನ ಚ ವಂದನಂ ಇದು ಕಾರಣ
ಕೂಡಲಚೆನ್ನಸಂಗಯ್ಯನಲ್ಲಿ
ಬಸವಣ್ಣನೊಬ್ಬನೆ ಭಕ್ತ; ಪ್ರಭುವೆ ಜಂಗಮ