ಅರ್ಪಿತವನರ್ಪಿತವೆಂಬ ಸಂದೇಹವಳಿದುಳಿದ ಪ್ರಸಾದಿಗೆ. ಅರ್ಪಿತ ಪ್ರಸಾದಕ್ಕೆಲ್ಲಿಯದೊ? ಆ ಪ್ರಸಾದ ಅರ್ಪಿತಕ್ಕೆಲ್ಲಿಯದೊ? ಲಿಂಗಾರ್ಪಿತಪ್ರಸಾದಂ ಚ ನ ದದ್ಯಾಜ್ಜಂಗಮಾಯ ವೈ ಜಂಗಮಾರ್ಪಿತಪ್ರಸಾದಂ ದದ್ಯಾತ್ತಂ ಲಿಂಗಮೂರ್ತಯೇ ಮಹದಿಂದಾದ ಸುಖವ ಸೂತಕಕ್ಕಿಕ್ಕುವ ಪಾತಕರನೇನೆಂಬೆ ಕೂಡಲಚೆನ್ನಸಂಗಯ್ಯಾ.