ಅಲ್ಪಜ್ಞಾನಿ ಪ್ರಕೃತಿ ಸ್ವಭಾವಿ,

ವಿಕಿಸೋರ್ಸ್ದಿಂದ



Pages   (key to Page Status)   


ಅಲ್ಪಜ್ಞಾನಿ ಪ್ರಕೃತಿ ಸ್ವಭಾವಿ
ಮಧ್ಯಮಜ್ಞಾನಿ ವೇಷಧಾರಿ
ಅತೀತಜ್ಞಾನಿ ಆರೂಢ. ಆರೂಢನಾದರೂ ಅರಿಯಬಾರದಯ್ಯಾ. ಜ್ಞಾನವನರಿಯದಾತ ಅಜ್ಞಾನಿ
ನಾಮನಷ್ಟ. ಈ ಚತುರ್ವಿಧದೊಳಗೆ ಆವಂಗವೂ ಇಲ್ಲ
ಗುಹೇಶ್ವರಾ_ನಿಮ್ಮ ಶರಣ.