ವಿಷಯಕ್ಕೆ ಹೋಗು

ಅಲ್ಲಲ್ಲಿ ಮುಟ್ಟಿತ್ತನಲ್ಲಲ್ಲಿಯೆ ಕೊಡಲು

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ಅಲ್ಲಲ್ಲಿ ಮುಟ್ಟಿತ್ತನಲ್ಲಲ್ಲಿಯೆ ಕೊಡಲು ಎಲ್ಲಿ ಹೋಯಿತ್ತಯ್ಯಾ
ನಿಮ್ಮ ಅಂಗಲಿಂಗಾರ್ಪಿತ ? ಕಾಲ ತಪ್ಪಿದ ಬಳಿಕ ಕೈಗೂಡಿದುದುಂಟೆ ? ಕೂಡಲಚೆನ್ನಸಂಗಯ್ಯಾ ಅಶನ ಮರಳುವುದಲ್ಲದೆ ರುಚಿ ಮರಳಲುಂಟೆ ?