ಅಳಿಸಂಕುಲವೆ, ಮಾಮರವೆ, ಬೆಳುದಿಂಗಳೆ,
ಗೋಚರ
ಲೇಖಕರು: Akka Mahaadevi
ಶೀರ್ಷಿಕೆ: vachana saahitya
ವರ್ಷ: 1130-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಅಳಿಸಂಕುಲವೆ
ಮಾಮರವೆ
ಬೆಳುದಿಂಗಳೆ
ಕೋಗಿಲೆಯೆ ನಿಮ್ಮನೆಲ್ಲರನೂ ಒಂದ ಬೇಡುವೆನು. ಎನ್ನೊಡೆಯ ಚೆನ್ನಮಲ್ಲಿಕಾರ್ಜುನದೇವ ಕಂಡಡೆ ಕರೆದು ತೋರಿರೆ.