ಅಶನಕ್ಕಂಜಿ ವೇಷವನೆ ಹೊತ್ತು

ವಿಕಿಸೋರ್ಸ್ದಿಂದ



Pages   (key to Page Status)   


ಅಶನಕ್ಕಂಜಿ ವೇಷವನೆ ಹೊತ್ತು ದೇಶವ ತೊಳಲುವ ಹಿರಿಯರ ಗಂಡ
ಕಾಲನ ಗಂಡ ಕರ್ಮದ ಗಂಡ ಲಿಂಗವಿಡಿದು ಸಾವ ಹಿರಿಯರ ಗಂಡ ಗುಹೇಶ್ವರಾ ನಿಮ್ಮ ಶರಣ ಘಟ್ಟಿವಾಳ ಅಲ್ಲಮನಂತಿಂತೆಂಬವರ ಗಂಡ.