ಅಷ್ಟಮೂರ್ತಿಗಳು ಕಾರಣವೆಂದೊಡೆ ದೇವರೆಂಬ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಷ್ಟಮೂರ್ತಿಗಳು ದೇವರೆಂಬ ಭ್ರಷ್ಟಭವಿಗಳ ಮಾತ ಕೇಳಲಾಗದು. ಅದೇನು ಕಾರಣವೆಂದೊಡೆ : ಪೃಥ್ವಿದೇವರಾದಡೆ
ಅಪ್ಪುವಿನ ಪ್ರಳಯದಲ್ಲಿ ಕರಗುವುದೆ ? ಅಪ್ಪು ದೇವರಾದಡೆ
ಅಗ್ನಿಯ ಪ್ರಳಯದಲ್ಲಿ ಅರತು ಹೋಗುವುದೆ ? ಅಗ್ನಿ ದೇವರಾದಡೆ
ವಾಯುವಿನ ಪ್ರಳಯದಲ್ಲಿ ಆರಿ ಹೋಗುವುದೆ ? ವಾಯು ದೇವರಾದಡೆ
ಆಕಾಶದ ಪ್ರಳಯದಲ್ಲಿ ಲಯವಪ್ಪುದೆ ? ಆಕಾಶ ದೇವರಾದಡೆ ಆತ್ಮನಲ್ಲಿ ಅಡಗಿಹೋಗುವುದೆ ? ಆತ್ಮದೇವರಾದಡೆ
ದ್ವಂದ್ವಕರ್ಮಂಗಳನುಂಡು ಜನನಮರಣಂಗಳಲ್ಲಿ ಬಂಧನವಡೆವನೆ ? ಚಂದ್ರಸೂರ್ಯರು ದೇವರಾದಡೆ ಭವಬಂಧನದಲ್ಲಿ ಸಿಲ್ಕಿ ತೊಳಲಿ ಬಳಲುವರೆ ? ಇದು ಕಾರಣ ಇಂತೀ ಅಷ್ಟತನುಗಳು ಎಂತು ದೇವರೆಂಬೆನು ? ದೇವರದೇವ ಮಹಾದೇವ ಮಹಾಮಹಿಮ ಎನ್ನೊಡೆಯ ಅಖಂಡೇಶ್ವರ ಒಬ್ಬನೆ ದೇವನಲ್ಲದೆ ಉಳಿದವರೆಲ್ಲ ಹುಸಿ ಹುಸಿ ಎಂಬೆನು ನೋಡಾ !