ಅಷ್ಟವಿಧಾರ್ಚನೆಯ ಮಾಡಿದರೇನೋ ತನುಗುಣಂಗಳ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಷ್ಟವಿಧಾರ್ಚನೆಯ ಮಾಡಿದರೇನೋ ತನುಗುಣಂಗಳ ಮೆಟ್ಟಿ ಮುರಿಯದನ್ನಕ್ಕರ? ಷೋಡಶೋಪಚಾರವ ಮಾಡಿದರೇನೋ ಸೂಳೆಯರಂತೆ ಹಲವು ಕಡೆಗೆ ಹೋಹ ಮನವ ನೆನಹಿನ ಹಸ್ತದಲ್ಲಿ ಹಿಡಿದು ಇಷ್ಟಲಿಂಗದಲ್ಲಿ ನೆನಹ ಗಟ್ಟಿಗೊಳಿಸಿ ಕೃತನಿಶ್ಚಯದಿಂ ದೃಢವಿಡಿದು ಅನಿಷ್ಟವ ಪರಿಹರಿಸಬಲ್ಲರೆ ಆತನೆ ಶಿವಲಿಂಗಾರ್ಚಕನು; ಲಿಂಗಧ್ಯಾನ ಸಂಪನ್ನನು; ಲಿಂಗವಲ್ಲದನ್ಯವನರಿಯದ ಅಚಲಿತ ಮಹಿಮನು ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.