ಅಸಂಖ್ಯಾತ ಉತ್ಪತ್ಯವಾಗದಂದು, ಆದಿಬ್ರಹ್ಮರುತ್ಪತ್ಯವಾಗದಂದು,
ಗೋಚರ
ಲೇಖಕರು: ಬಾಲಸಂಗಯ್ಯ ಅಪ್ರಮಾಣ ದೇವ
ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಅಸಂಖ್ಯಾತ ಆದಿಬ್ರಹ್ಮರುತ್ಪತ್ಯವಾಗದಂದು
ಅಸಂಖ್ಯಾತ ಆದಿನಾರಾಯಣರುತ್ಪತ್ಯವಾಗದಂದು
ಅಸಂಖ್ಯಾತ ಸುರೇಂದ್ರಾದಿಗಳು ಉತ್ಪತ್ಯವಾಗದಂದು
ಅಸಂಖ್ಯಾತ ಮನುಮುನಿ ದೈತ್ಯರು ಉತ್ಪತ್ಯ ಲಯವಾಗದಂದು
ಓಂಕಾರವೆಂಬ ಆದಿಪ್ರಣವವಾಗಿದ್ದನು ನೋಡಾ ನಮ್ಮ ಅಪ್ರಮಾಣಕೂಡಲಸಂಗಮದೇವ.