ಆಕಾಶ ನೀನೆ
ಗೋಚರ
ಆಕಾಶ ನೀನೆ ನೀಡೊಂದು ಗೂಡು
ಬಂತೀಗ ಪ್ರೀತಿ ಹಾರಿ
ತಂಗಾಳಿ ನೀನೆ ನೀಡೊಂದು ಹಾಡು
ಕಂಡಿತು ಕಾಲುದಾರಿ
ಒಂದಾದ ಜೀವ ಹೂವಾಗುವಂತೆ ಎಂದೂ ಕಾಪಾಡಲೀ
ಪ್ರೀತಿಯ ಅಂಬಾರಿ||
ಕಣ್ಣಿನಲ್ಲಿ ಕಣ್ಣಿರೆ ಲೋಕವೆಲ್ಲ ಹೂ ಹಂದರ
ಭಾವವೊಂದೆ ಆಗಿರೆ ಬೇಕೆ ಬೇರೆ ಭಾಷಾಂತರ
ಎದೆಯಿಂದ ಹೊರಹೋಗೊ ಉಸಿರೆಲ್ಲ ಕನಸಾಗಲಿ
ಈ ಪ್ರೀತಿ ಜೊತೆಯಲ್ಲಿ ಒಂದೊಂದು ನನಸಾಗಲಿ
ಕೊನೆಯಿಲ್ಲದ ಕುಶಲೋಪರಿ ಪ್ರೀತಿಯ ಅಂಬಾರಿ||
ಕಾಣದಂತ ಹೊಸ್ತಿಲು ದೂರದಿಂದ ಬಾ ಎಂದಿದೆ
ಪೆದ್ದು ಮುದ್ದು ಜೋಡಿಗೆ ಸಿಕ್ಕ ಪ್ರೀತಿ ಸೊಗಸಾಗಿದೆ
ಆ ಸೂರ್ಯ ಸರಿದಾಗ ಈ ಪ್ರೇಮ ರೋಮಾಂಚನ
ಮುಸ್ಸಂಜೆ ಕವಿದಾಗ ಈ ಪ್ರೇಮ ನೀಲಾಂಜನ
ಮುಂದರಿಯುವ ಕಾದಂಬರಿ ಪ್ರೀತಿಯ ಅಂಬಾರಿ||