ಆಗಮಮೂರ್ತಿ ಅಂತರಾತ್ಮನೊಳಿರುತಿರೆ ಆಗಮವನರಿಯಬೇಕೆಂದೇನು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಆಗಮಮೂರ್ತಿ ಅಂತರಾತ್ಮನೊಳಿರುತಿರೆ ಆಗಮವನರಿಯಬೇಕೆಂದೇನು ಹೇಳಿರೋ? ಆಗಮವ ವಿಚಾರಿಸಿ ಅರಿಯಬೇಕೆಂಬ ಅರುಹು ಲೋಗರಿಗಲ್ಲದೆ ಆಗಮಮೂರ್ತಿಯೇ ತಾನಾದರುಹು ಕುರುಹುಗೊಂಡ ಮೂರ್ತಿಗೆ ಆಗಮವಿಚಾರವೆಂದೇನು ಹೇಳ? ಆಗಮ
ಅರುಹಿನಮೂರ್ತಿ ಮಾಡಿದರಾದವು ಕಾಣಿರಣ್ಣ. ವೇದ
ವಿವೇಕಿ ನುಡಿದರಾದವು ಕಾಣಿರಣ್ಣ. ಶಾಸ್ತ್ರ
ಸರ್ವಜ್ಞ ನಿರ್ಮಿಸಿದರಾದವು ಕಾಣಿರಣ್ಣ. ಪುರಾಣ ಅಗ್ರಗಣ್ಯ ಆಗೆಂದರಾದವು ಕಾಣಿರಣ್ಣ. ತರ್ಕವ ಅತರ್ಕ ್ರ್ಯನು
ಅರ್ಥಿಗೆ ಆಡಿಸಾಡಿ ನೋಡಬೇಕೆಂದು ಮಾಡಿದ ನೋಡ. ವೇದ ಶಾಸ್ತ್ರ
ಪುರಾಣಾಗಮ ತರ್ಕ ಇವು ಉಪಮೆಯೊಳಗು. ಉಪಮೆಗೊಳಗಾದವು ಉಪಮಾತೀತನ ಇವೆತ್ತ ಬಲ್ಲವು ಹೇಳ? ಆತ್ಮಲಿಂಗದ ಆದ್ಯಂತವನರಿಯದೆ ದ್ವೆ ೈತಾದ್ವೆ ೈತಿಗಳೆಂದು ನುಡಿದುಕೊಂಡು ನಡೆವ ಭವರೋಗಿಗಳನೇನೆಂಬೆನಯ್ಯ? ಆಗಮಮೂರ್ತಿ
ಅಂತರಂಗ ಬಹಿರಂಗ ಸರ್ವಾಂಗ ಅಂತರ್ಯಾಮಿಯಾಗಿಹುದ ಶಿವ ಪ್ರಸನ್ನ ಪ್ರಸಾದದಿಂದೊದಗಿದ ಸ್ವಾನುಭಾವಿ ಬಲ್ಲ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವಿನಲ್ಲಿ. ಬಸವಣ್ಣ
ಪ್ರಭು
ಚೆನ್ನಬಸವಣ್ಣ ಮುಖ್ಯರಾದ ನಮ್ಮ ಪ್ರಮಥರು ಬಲ್ಲರು ಶಿವನ ಘನವ.