ಆಗಮವ ಬಲ್ಲೆ ಆಗಮವ
ಗೋಚರ
ಲೇಖಕರು: ತೊಂಟದ ಸಿದ್ಧಲಿಂಗೇಶ್ವರ ಶಿವಯೋಗಿಗಳು
ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಆಗಮವ ಬಲ್ಲೆ ಆಗಮವ ಬಲ್ಲೆವೆಂದು ಆಗಮಜ್ಞರೆನಿಸಿಕೊಂಬರು ನೀವು ಕೇಳಿರೋ. ಆಗಮವೆಂದು ನುಡಿವ ವಾಗಿಂದ್ರಿಯವ ಬಲ್ಲಿರಲ್ಲದೆ
ಆಗಮಮೂರ್ತಿ ಹೇಗಿಹುದು ಬಲ್ಲರೆ[ನೀವು] ಹೇಳಿ. ಆಗಮಮೂರ್ತಿ ವಾಙ್ಮನಕ್ಕಗೋಚರವು. ವಾಙ್ಮನಕ್ಕಗೋಚರವಾದ ವಸ್ತುವ ಆಗಮದಿಂದ ಅಂತಿದೆ
ಇಂತಿದೆಯೆಂದು ಹೇಳುವ ಭ್ರಾಂತಿನ ಬಹುಭಾರಿಗಳನೇನೆಂಬೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.