ಆಚಾರದುಂದುಭಿಯನೇನೆಂದು ಭಾವಿಸುವೆ, ಬೆಳಗಿನೊಳಗೆ
ಗೋಚರ
ಲೇಖಕರು: ಚೆನ್ನಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಆಚಾರದುಂದುಭಿಯನೇನೆಂದು ಭಾವಿಸುವೆ
ಬೆಳಗಿನೊಳಗೆ ತೊಳಗುತ್ತಿರ್ದೆನು. ಅರಿವಿನಾಚರಣೆಯ ತೆರನ ಪೇಳುತಿರ್ದೆನು ಭೇದಾಭೇದದೊಳಗಣ ಮಹಾಘನ ಸ್ಫಟಿಕದ ಗಿರಿಯ ತಟದಲ್ಲಿ ನಿಂದರೆ ಘಟಹೊಳೆವುದು ಒಳಗೆ ಹೊರಗೆನ್ನದೆ. ಪರುಷದ ಗಿರಿಯ ಕಡಿಯಲೆಂದು ಹೋದರಾ ಹಿಡಿದುಳಿ ಕೊಡತಿ ಪರುಷವಾದ ಬಳಿಕಾಚಾರ ಮಾಣಿಕ್ಯವ ಹಿಡಿದವನ ಕೈ ಸೆಕೆ ಹತ್ತುವದೆ ? ಲಿಂಗ ಜಂಗಮ ಪ್ರಸಾದವೆಂದರಿದಂಗಾಚಾರ ಸಂಪಗೆಯ ಪುಷ್ಪದಲ್ಲಿ ಕಂಪುಂಡ ಭ್ರಮರನಂತೆ ಕೂಡಲಚೆನ್ನಸಂಗನ ಶರಣಂಗಾಯಿತ್ತಾಚಾರ