ಆಚಾರಲಿಂಗದ ಪ್ರಸನ್ನತ್ವದಿಂದ ಭಕ್ತ

ವಿಕಿಸೋರ್ಸ್ದಿಂದ



Pages   (key to Page Status)   


ಆಚಾರಲಿಂಗದ ಪ್ರಸನ್ನತ್ವದಿಂದ ಭಕ್ತ ಬಯಲಾದನು. ಗುರುಲಿಂಗದ ಪ್ರಸನ್ನತ್ವದಿಂದ ಮಹೇಶ್ವರ ಬಯಲಾದನು. ಶಿವಲಿಂಗದ ಪ್ರಸನ್ನತ್ವದಿಂದ ಪ್ರಸಾದಿ ಬಯಲಾದನು. ಜಂಗಮಲಿಂಗದ ಪ್ರಸನ್ನತ್ವದಿಂದ ಪ್ರಾಣಲಿಂಗಿ ಬಯಲಾದನು. ಪ್ರಸಾದಲಿಂಗದ ಪ್ರಸನ್ನತ್ವದಿಂದ ಶರಣ ಬಯಲಾದನು. ಮಹಾಲಿಂಗದ ಪ್ರಸನ್ನತ್ವದಿಂದ ಐಕ್ಯ ಬಯಲಾದನು. ಈ ಷಡ್ವಿಧಲಿಂಗದ ಪ್ರಸನ್ನೇತಿ ಪ್ರಸಾದದಲ್ಲಿ ಷಡಂಗವು ಸಮರಸವಾದವು. ಈ ಷಡ್ವಿಧಲಿಂಗದ ಪ್ರಸನ್ನೇತಿ ಪ್ರಸಾದವನ್ನೇ ಪದಾರ್ಥವ ಮಾಡಿ ಬ್ರಹ್ಮರಂಧ್ರದ ಸಹಸ್ರದಳಕಮಲಕರ್ಣಿಕಾಮಧ್ಯದಲ್ಲಿಪ್ಪ ಸಚ್ಚಿದಾನಂದ ನಿತ್ಯ ಪರಿಪೂರ್ಣವಪ್ಪ ಘನ ಚೈತನ್ಯವೆಂಬ ಪರಮ ಚರಲಿಂಗಕ್ಕೆ ಸಮರ್ಪಣವ ಮಾಡಿ ಆ ಪರಮ ಚರಲಿಂಗದ ಪ್ರಸನ್ನ ಪ್ರಸಾದದೊಳಗೂಡಿ ನಿರವಯವಾಯಿತ್ತು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.